ಪ್ರಕಾಶ್ ರೈ ಅವರಿಗೆ ಮೂರು ಕಾಸಿನ ಬೆಲೆ ಕೂಡ ಇಲ್ಲ: ಪ್ರತಾಪ್ ಸಿಂಹ

BREAKING NEWS, Kannada News, Regional, Top News No Comments on ಪ್ರಕಾಶ್ ರೈ ಅವರಿಗೆ ಮೂರು ಕಾಸಿನ ಬೆಲೆ ಕೂಡ ಇಲ್ಲ: ಪ್ರತಾಪ್ ಸಿಂಹ 25

ಮೈಸೂರು: ನಟ ಪ್ರಕಾಶ್ ರೈ ನನ್ನ ಮೇಲೆ 1 ರೂಪಾಯಿಗೆ ಮಾನದಷ್ಟ ಮೊಕದ್ದಮೆ ದಾಖಲಿಸಿದ್ದಾರೆ, ಅವರನ್ನ ನಾನು ತುಂಬು ಹೃದಯದಿಂದ ಅಭಿನಂಧಿಸುತ್ತೇನೆ. ಮೂರು ಕಾಸಿನ ಬೆಲೆ ಕೂಡ ಅವರಿಗೆ ಇಲ್ಲ ಅಂತ ಸಾಭಿತಾಯಿತು ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಮೈಸೂರಿನ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು ನೆನ್ನೆ ಪ್ರಕಾಶ್ ರೈ ರವರು ನಾನು ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದೇನೆ ಎಂದು ನನ್ನ ಮೇಲೆ ಮೈಸೂರಿನ ನ್ಯಾಯಾಲಯದಲ್ಲಿ 1 ರೂಪಾಯಿಗೆ ಮಾನದಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಸಮಾಜದಲ್ಲಿ ಪ್ರಕಾಶ್ ರೈ ತಮಗಿರುವ ಮಾನ ಮರ್ಯಾದೆಗಿರುವ ಮೌಲ್ಯ ಕೇವಲ ಒಂದು ರೂಪಾಯಿಗಿಂತಲೂ ಕೀಳು ಎಂದು ಅವರೇ ಒಪ್ಪಿಕೊಂಡಿದ್ದಾರೆ. 

ಪ್ರಕಾಶ್ ರೈ ಕೇವಲ ಸಿನಿಮಾ ಜಗತ್ತಿಗೆ ಮಾತ್ರ ಖಳನಟರಲ್ಲ. ನಿಜ ಜೀವನದಲ್ಲೂ ಖಳನಟನ ಪಾತ್ರ ನಿರ್ವಹಿಸುತ್ತಿದ್ದಾರೆ. ಒಂದೊಂದು ಸಿನಿಮಾದಲ್ಲಿ ಖಳನಟರಿಗೆ ಬೇರೆ ಬೇರೆ ಹೆಸರಿರುತ್ತದೆ. ಹಾಗೇ ಇವರು ಕೂಡ. ಒಂದೋದು ಕಡೆ ಹೋದ್ರು ಕೂಡ ಒಂದೊಂದು ಹೆಸರು ಹೇಳ್ತಾರೆ. ದೆಹಲಿಯಲ್ಲಿ ಪ್ರಕಾಶ್ ರಾಜ್ ಅಂತ ಹೇಳಿಕೊಳ್ಳುತ್ತಾರೆ. ಮೈಸೂರಿನಲ್ಲಿ ಪ್ರಕಾಶ್ ರೈ ಅಂತಾರೇ. ಆದರೆ ಅವರ ನಿಜವಾದ ಹೆಸರು ಯಾವುದು ಅನ್ನೋದನ್ನ ಮೊದಲು ಸ್ಪಷ್ಟಪಡಿಸಲಿ. ನಾನು ಅವರ ವಿರುದ್ಧ ಟ್ವೀಟ್ ಮಾಡಿಲ್ಲ. ತಪಸ್ವೀ ಅನ್ನುವರು ಫೋಸ್ಟ್ ಮಾಡಿದ್ದು, ಅದನ್ನ ನಾನು ಶೇರ್ ಮಾಡಿದೆ. ಅವರ ಮೇಲೆ ಮೊಕದ್ದಮೆ ದಾಖಲಿಸದೇ ನನ್ನ ಮೇಲೆ ಮೊಕದ್ದಮೆ ಹೂಡಿದ್ದಾರೆ. ಆಗಾದರೇ ಶೇರ್ ಮಾಡಿದವರ ಮೇಲೆ ಮೊಕದ್ದಮೆ ಹೂಡುತ್ತಾರಾ ಎಂದು ಪ್ರಶಿಸಿದರು.

Related Articles

Leave a comment

Back to Top

© 2015 - 2017. All Rights Reserved.