ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಪರೀಕ್ಷಾ ಕೇಂದ್ರದ ಸುತ್ತ ನಿಷೇದಾಜ್ಞೆ

Kannada News, Regional No Comments on ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಪರೀಕ್ಷಾ ಕೇಂದ್ರದ ಸುತ್ತ ನಿಷೇದಾಜ್ಞೆ 44

ಮೈಸೂರು: ನಗರದಲ್ಲಿ ಮಾರ್ಚ್ 1ರಿಂದ 17ರವರೆಗೆ ದ್ವಿತೀಯ ಪಿಯುಸಿ ಪರಿಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ನಡೆಯುವ ಒಟ್ಟು 26ಪರೀಕ್ಷಾ ಕೇಂದ್ರದ ಬಳಿ ಕಲಂ144 ಸಿ.ಆರ್.ಪಿಸಿ ರೀತ್ಯ ನಿಷೇದಾಜ್ಞೆ ಹೊರಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮಗಳು ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಸಂಭವ ಹೆಚ್ಚಾಗಿ ಕಂಡುಬಂದಿದ್ದು, ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಕ್ತವಾಗಿ ಶಾಂತ ವಾತಾವರಣದಲ್ಲಿ ನಡೆಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ನಗರದಲ್ಲಿನ ಎಲ್ಲಾ ಪರೀಕ್ಷಾ ಕೇಂದ್ರಗಳ 200ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತ ಬೆಳಿಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ 144 ಜಾರಿಯಲ್ಲಿರಲಿದೆ.

ಪರೀಕ್ಷಾ ಕೇಂದ್ರದ ಸುತ್ತಲೂ ಇರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಸಮಯದಲ್ಲಿ ಮುಚ್ಚಬೇಕು ಎಂದು ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರದ ಬಳಿ ಪರೀಕ್ಷಾರ್ಥಿಗಳು, ಪರೀಕ್ಷಾ ಸಿಬ್ಬಂದಿಗಳು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದೆಂದು ತಿಳಿಸಿದ್ದಾರೆ.

ಜೆಎಲ್ ಬಿ ರಸ್ತೆಯ ಸರ್ಕಾರಿ ಪಪೂ ಕಾಲೇಜ್, ಮಹಾರಾಣಿ ಸರ್ಕಾರಿ ಪಪೂ ಕಾಲೇಜ್, ಡಿ.ಬನುಮಯ್ಯ ಪಪೂ ಕಾಲೇಜ್, ಸದ್ವಿದ್ಯಾ ಪಪೂ ಕಾಲೇಜ್, ಮರಿಮಲ್ಲಪ್ಪ ಪಪೂ ಕಾಲೇಜ್, ಜೆಎಸ್ ಎಸ್ ಪಪೂ ಕಾಲೇಜ್ ಊಟಿ ರಸ್ತೆ, ಗೋಪಾಲಸ್ವಾಮಿ ಪಪೂ ಕಾಲೇಜ್, ಜೆಎಸ್ ಎಸ್ ಬಾಲಕಿಯರ ಪಪೂ ಕಾಲೇಜ್, ಆದಿಚುಂಚನಗಿರಿ ಪಪೂ ಕಾಲೇಜ್, ಸರ್ಕಾರಿ ಪಪೂ ಕಾಲೇಜ್ ಕುವೆಂಪುನಗರ, ಎಂಎಂಕೆ, ಎಸ್ ಡಿಎಂ ಪಪೂ ಕಾಲೇಜ್, ಶಾರದಾ ವಿಲಾಸ ಪಪೂ ಕಾಲೇಜ್, ಲಕ್ಷ್ಮಿಹಯಗ್ರೀವ ಪಪೂ ಕಾಲೇಜ್ ದಟ್ಟಗಳ್ಳಿ, ವಿದ್ಯಾವರ್ಧಕ ಪಪೂ ಕಾಲೇಜ್, ಬಾಲಕಿಯರ ಸರ್ಕಾರಿ ಪಪೂ ಕಾಲೇಜ್, ವಿಭಜಿತ ಸರ್ಕಾರಿ ಪಪೂ ಕಾಲೇಜ್, ಶ್ರೀವಾಣಿ ವಿಲಾಸ ಅರಸು ಬಾಲಿಕ ಪಪೂ ಕಾಲೇಜ್, ಟೆರಿಷಿಯನ್ ಪಪೂ ಕಾಲೇಜ್, ಸಂತಫಿಲೋಮಿನಾ ಪಪೂ ಕಾಲೇಜ್, ವಿಜಯವಿಠಲ ಪಪೂ ಕಾಲೇಜ್, ಮಾತೃಮಂಡಳಿ ಪಪೂ ಕಾಲೇಜ್, ಎಸ್.ಬಿ.ಆರ್.ಆರ್.ಪಪೂ ಕಾಲೇಜ್, ಚಿನ್ಮಯ ಪಪೂ ಕಾಲೇಜ್, ವಿವೇಕಾನಂದ ಪಪೂ ಕಾಲೇಜ್, ಸದ್ವಿದ್ಯಾ ಸೆಮಿ ರೆಸಿಡೆನ್ಶಿಯಲ್ ಪಪೂ ಕಾಲೇಜ್, ಸರ್ಕಾರಿ ಪಪೂ ಕಾಲೇಜ್ ಮಂಚೇಗೌಡನ ಕೊಪ್ಪಲು ಪರೀಕ್ಷಾ ಕೇಂದ್ರದಲ್ಲಿ ಪಿಯು ಪರೀಕ್ಷೆ ನಡೆಯಲಿದೆ. 

Related Articles

Leave a comment

Back to Top

© 2015 - 2017. All Rights Reserved.