ಪಂಚಭೂತಗಳಲ್ಲಿ ಲೀನರಾದ ಸೌಂದರ್ಯದ ‘ಸಿರಿದೇವಿ’

BREAKING NEWS, Entertainment, Kannada News, National No Comments on ಪಂಚಭೂತಗಳಲ್ಲಿ ಲೀನರಾದ ಸೌಂದರ್ಯದ ‘ಸಿರಿದೇವಿ’ 36

ಮುಂಬೈ: ದುಬೈನ ಹೋಟೆಲ್ ವೊಂದರಲ್ಲಿ ಆಕಸ್ಮಿಕವಾಗಿ ಬಾತ್ ಟಬ್ ಗೆ ಬಿದ್ದು ಮೃತಪಟ್ಟ ನಟಿ ಶ್ರೀದೇವಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

ವಿಲ್ಲೆಪಾರ್ಲೆಯ ಹಿಂದೂ ಸೇವಾ ಸಮಾಜದ ರುದ್ರಭೂಮಿಯಲ್ಲಿ ಪತಿ ಬೋನಿ ಕಪೂರ್​ 5.20ರ ಸುಮಾರಿಗೆ ಪಾರ್ಥೀವ ಶರೀರಕ್ಕೆ ಅಯ್ಯಂಗಾರ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರು. ಅಲ್ಲದೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಗಲಿದ ನಟಿಗೆ ಅಂತಿಮ ವಿದಾಯ ಹೇಳಲಾಯಿತು. ಬಾಲಿವುಡ್ ತಾರೆಯರು, ಗಣ್ಯರು, ಸಾವಿರಾರು ಅಭಿಮಾನಿಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಬೋನಿ ಕಪೂರ್‌ ಅವರು ಪತ್ನಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಇದಕ್ಕೂ ಮುನ್ನ ಮಲ್ಲಿಗೆ ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಸುಮಾರು ಏಳು ಕಿಲೋ ಮೀಟರ್‌ವರೆಗೆ ಮೆರವಣಿಗೆಯ ಮೂಲಕ ವಿಲ್ಲೆಪಾರ್ಲೆಯ ಸೇವಾ ಸಮಾಜ ಹಿಂದೂ ಚಿತಾಗಾರಕ್ಕೆ ತರಲಾಯಿತು. 54 ವರ್ಷದ ಶ್ರೀದೇವಿ ಅವರ ಕೊನೆ ಆಸೆಯಂತೆ ಕೆಂಪು ಮತ್ತು ಚಿನ್ನದ ಬಣ್ಣದ ಕಾಂಚಿವರಂ ಸೀರೆಯನ್ನುಡಿಸಿ ಶೃಂಗಾರ ಮಾಡಲಾಗಿತ್ತು.

Related Articles

Leave a comment

Back to Top

© 2015 - 2017. All Rights Reserved.