ಮಾ.3 ರಿಂದ 5 ರವರಗೆ ಉದ್ಯೋಗ ಮೇಳ: ಉದ್ಯೋಗಾಂಕ್ಷಿಗಳಿಗೆ ಉದ್ಯೋಗಕ್ಕೆ ಪೂರಕವಾದ ತರಬೇತಿಗೆ ಹೆಚ್ಚು ಆದ್ಯತೆ

Kannada News, Regional No Comments on ಮಾ.3 ರಿಂದ 5 ರವರಗೆ ಉದ್ಯೋಗ ಮೇಳ: ಉದ್ಯೋಗಾಂಕ್ಷಿಗಳಿಗೆ ಉದ್ಯೋಗಕ್ಕೆ ಪೂರಕವಾದ ತರಬೇತಿಗೆ ಹೆಚ್ಚು ಆದ್ಯತೆ 28

ಮೈಸೂರು: ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಮೈಸೂರು ವಿಭಾಗ ಮಟ್ಟದ ಕೌಶಲ್ಯ ಹಾಗೂ ಉದ್ಯೋಗ ಮೇಳವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಾರ್ಚ್ 3 ರಿಂದ 5 ರವರಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗಾಂಕ್ಷಿಗಳಿಗೆ ಉದ್ಯೋಗಕ್ಕೆ ಪೂರಕವಾದ ತರಬೇತಿಗೆ ಹೆಚ್ಚು ಆದ್ಯತೆ ನೀಡುವ ದೃಷ್ಠಿಯಿಂದ ಮೊದಲ ದಿನ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಈಗಾಲೇ 22 ಜಿಲ್ಲಾ ಕೇಂದ್ರಗಳಲ್ಲಿ ಕೌಶಲ್ಯ ಮೇಳ ಆಯೋಜಿಸಿ 2.5 ಲಕ್ಷ ಅಭ್ಯರ್ಥಿಗಳಿಗೆ ಪ್ರಸಿದ್ಧ ಸಂಸ್ಥೆಗಳಿಂದ ಕೌಶಲ್ಯ ಮತ್ತು ನೈಪುಣ್ಯತೆ ರೂಢಿಸಿಕೊಳ್ಳುವ ತರಬೇತಿ ನೀಡಲಾಗಿದೆ. ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ದೂರವಾಣಿ ಸಂಖ್ಯೆ-6360855081 ಹಾಗೂ ಇ-ಮೇಲ್ www.skillandjobfair.com ನ್ನು ಸಂಪರ್ಕಿಸಬಹುದು.

ಮೈಸೂರಿನಲ್ಲಿ ಮಾರ್ಚ್ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಆಶಾದೀಪಾ” ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಈ ಕಾರ್ಯಕ್ರಮದ ಉದ್ದೇಶ ಸರ್ಕಾರದ ವತಿಯಿಂದ ಕಾರ್ಮಿಕರಿಗೆ ಅವರ ಸಂಬಳದ ಶೇ. 18% ರಷ್ಟು ಇ.ಎಸ್.ಐ ಮತ್ತು ಪಿ.ಎಫ್‍ನ್ನು ನೀಡುವ ಯೋಜನೆಯಾಗಿದೆ. ಗುತ್ತಿಗೆ ಕಾರ್ಮಿಕರಿಗೆ ಒಂದು ವರ್ಷ ಮತ್ತು ಖಾಯಂ ಕಾರ್ಮಿಕರಿಗೆ ಎರಡು ವರ್ಷ ಸರ್ಕಾರ ಇ.ಎಸ್.ಐ ಮತ್ತು ಪಿ.ಎಫ್ ಭರಿಸಲಿದೆ.

ಕೈಗಾರಿಕೋಧ್ಯಮಿಗಳು ಉದ್ಯೋಗ ಸೃಷ್ಠಿಗೆ ಅವಕಾಶ ಕಲ್ಪಿಸುವುದಾಗಿದೆ. 2017-18 ನೇ ಬಜೆಟ್‍ನಲ್ಲಿ 45 ಕೋಟಿಯನ್ನು ಮೀಸಲಿಡಲಾಗಿದೆ, ಮಾರ್ಚ್ 10 ರಂದು “ವಿದೇಶಿಕೋಶ” ಎಂಬ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡುವರು. ರಾಜ್ಯದ ಉದ್ಯೋಗಾಂಕ್ಷಿಗಳ ಹೊರ ದೇಶದಲ್ಲೂ ಉದ್ಯೋಗ ಕಲ್ಪಿಸುವುದಾಗಿದೆ. 12 ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಶಾಸಕ ಎಂ.ಕೆ ಸೋಮಶೇಖರ್ ಮಾತನಾಡಿ ಈ ಹಿಂದೆ 3 ಮೇಳ ಆಯೋಜಿಸಲಾಗಿದೆ .ಇದು ನಾಲ್ಕನೇ ಮೇಳ ಈ ಬಾರಿ 200 ಕ್ಕೂ ಅಧಿಕ ಕಂಪನಿಗಳ ಭಾಗವಹಿಸಲಿವೆ ಅವರಿಗೆ ಊಟ, ವಸತಿ ಸೌಲಭ್ಯವನ್ನು ಕಲ್ಪಿಸುವಂತೆ ತಿಳಿಸಿದರು.

ಅಭ್ಯರ್ಥಿಗಳ ವಿದ್ಯಾರ್ಹತೆಗೆ ತಕ್ಕಂತೆ ಆಯಾಯ ಕಂಪನಿಗಳಿಗೆ ಸಂಪರ್ಕ ಮಾಡುವಂತೆ ಆನ್‍ಲೈನ್‍ನಲ್ಲಿ ಸಿದ್ಧಪಡಿಸಿದೆ ಮಾಹಿತಿ ಅಭ್ಯರ್ಥಿಗಳಿಗೆ ತಲುಪಲಿದೆ ಹಾಗೂ ಉದ್ಯೋಗಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮಧ್ಯಾಹ್ನದ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು ಆರ್. ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.