ರಾಷ್ಟ್ರಪತಿ ಅವರು ಕ್ಷಮೆ ಯಾಚಿಸಬೇಕು ಎಂದು ವಿದ್ಯಾರ್ಥಿಗಳ ಒತ್ತಾಯ

Kannada News, National, Top News No Comments on ರಾಷ್ಟ್ರಪತಿ ಅವರು ಕ್ಷಮೆ ಯಾಚಿಸಬೇಕು ಎಂದು ವಿದ್ಯಾರ್ಥಿಗಳ ಒತ್ತಾಯ 24

ಲಖನೌ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಕ್ಷಮೆ ಯಾಚಿಸಬೇಕು. ಈ ಬಳಿಕವೇ ಅವರು ಅಲಿಗಢ ಮುಸ್ಲಿಂ ವಿವಿ ಘಟಿಕೋತ್ಸವದಲ್ಲಿ ಭಾಗವಹಿಸಬೇಕು ಎಂದು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

2010 ರಲ್ಲಿ ‘ಇಸ್ಲಾಂ ಮತ್ತು ಕ್ರೈಸ್ತ ಧರ್ಮೀಯರನ್ನು ಪರಿಶಿಷ್ಟ ಜಾತಿಗಳ ಅಡಿ ಸೇರಿಸಲಾಗದು. ಆ ಧರ್ಮಗಳು ಭಾರತಕ್ಕೆ ಪರಕೀಯ’ ಎಂದು ಹೇಳಿಕೆ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ವಿದ್ಯಾರ್ಥಿಗಳಲ್ಲಿ ಪ್ರತಿರೋಧದ ಭಾವನೆಯಿದೆ, ಏನಾದರೂ ಅಹಿತಕರವಾದುದು ನಡೆದರೆ ರಾಷ್ಟ್ರಪತಿ ಮತ್ತು ಕುಲಪತಿಯವರೇ ಹೊಣೆ’ ಎಂದು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಜ್ಜದ್‌ ಸುಭಾನ್‌ ಹೇಳಿದ್ದಾರೆ.

2010ರಲ್ಲಿ ರಂಗನಾಥ ಮಿಶ್ರಾ ಆಯೋಗದ ವರದಿಯಲ್ಲಿ ಮುಸ್ಲಿಮರಿಗೆ ಮೀಸಲಾತಿಯ ಶಿಫಾರಸು ಮಾಡಿದ್ದಾಗ, ಮುಸ್ಲಿಮರನ್ನು ಮೀಸಲಾತಿ ವ್ಯಾಪ್ತಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಆಗ ಬಿಜೆಪಿ ವಕ್ತಾರರಾಗಿದ್ದ ಕೋವಿಂದ್‌ ಹೇಳಿದ್ದರು. ಸಿಖ್ಖರಿಗೆ ಮೀಸಲಾತಿ ನೀಡುವ ಬಗ್ಗೆ ಪ್ರಶ್ನಿಸಿದಾಗ, ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಭಾರತಕ್ಕೆ ಪರಕೀಯ ಎಂದಿದ್ದರು.

Related Articles

Leave a comment

Back to Top

© 2015 - 2017. All Rights Reserved.