ಯೂಟ್ಯೂಬ್’ನಲ್ಲಿ ‘ಕಾಲಾ’ ಟೀಸರ್​ ಹವಾ: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ ಮಿಲಿಯನ್ ವೀವ್ಸ್..!

Entertainment, Kannada News No Comments on ಯೂಟ್ಯೂಬ್’ನಲ್ಲಿ ‘ಕಾಲಾ’ ಟೀಸರ್​ ಹವಾ: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ ಮಿಲಿಯನ್ ವೀವ್ಸ್..! 34

ಬೆಂಗಳೂರು: ರಜನೀಕಾಂತ್​ ಅಭಿನಯದ ಕಾಲಾ ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಯೂ ಟ್ಯೂಬ್​ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಟೀಸರ್​ ಹೊರಬಿದ್ದ ಕೆಲವೇ ಗಂಟೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ರಜನಿ ಬ್ಲಾಕ್​ ಆ್ಯಂಡ್​ ಬ್ಲಾಕ್​ ಡ್ರೆಸ್​ನಲ್ಲಿ ಮಿಂಚಿದ್ದು ಅಭಿಮಾನಿಗಳಿಗೆ ಥ್ರಿಲ್​ ಕೊಡುವಂತ ಡೈಲಾಗ್​ ಇದೆ. ನಾನಾ ಪಾಟೇಕರ್​ ವಿಲನ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ.

https://youtu.be/Wm_vSSlVsV4

ಕಳೆದ ಫೆಬ್ರವರಿ 28ರಂದೇ ಚಿತ್ರದ ಟೀಸರ್ ಬಿಡುಗಡೆಯಾಗ ಬೇಕಿತ್ತು. ಆದರೆ ಕಂಚಿಮಠದ ಶ್ರೀಗಳಾದ ಜಯೇಂದ್ರ ಸರಸ್ವತಿ ಅವರು ನಿಧನರಾದ ಹಿನ್ನಲೆಯಲ್ಲಿ ಟೀಸರ್ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿತ್ತು. ಈಗಾಗಿ ಮಾರ್ಚ್ 2ರಂದು ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಯೂಟ್ಯೂಬ್ ನಲ್ಲಿ ಇಂದು ಕಾಲಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಚಿತ್ರಕ್ಕೆ ಕಬಾಲಿ ನಿದೇರ್ಶಕ ಪ.ರಂಜಿತ್​ ಕಾಲಾ ಚಿತ್ರಕ್ಕೂ ಆ್ಯಕ್ಷನ್​ ಕಟ್ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.