ಮೈಸೂರು ಅರಮನೆಯಲ್ಲಿ ಯುವರಾಜನಿಗೆ ಅದ್ಧೂರಿ ಸ್ವಾಗತ: ಆದ್ಯವೀರ್ ನೋಡಿ ಅರಮನೆ ಸಿಬ್ಬಂದಿಗಳು ಫುಲ್ ಖುಷ್

BREAKING NEWS, Kannada News, Regional, Top News No Comments on ಮೈಸೂರು ಅರಮನೆಯಲ್ಲಿ ಯುವರಾಜನಿಗೆ ಅದ್ಧೂರಿ ಸ್ವಾಗತ: ಆದ್ಯವೀರ್ ನೋಡಿ ಅರಮನೆ ಸಿಬ್ಬಂದಿಗಳು ಫುಲ್ ಖುಷ್ 29

ಮೈಸೂರು: ಕಳೆದ ವಾರ ಬೆಂಗಳೂರಿನಲ್ಲಿ ನಾಮಕರಣ ಮುಗಿದ ನಂತರ ಇದೀಗ ಪುತ್ರ ಆದ್ಯವೀರ್ ಜೊತೆ ಯದುವೀರ್ ದಂಪತಿ ಮೈಸೂರು ಅರಮನೆಗೆ ಆಗಮಿಸಿದ್ದು, ಮುತ್ತೈದೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ.

ಬೆಂಗಳೂರು ಅರಮನೆಯಲ್ಲಿ ಯದುವೀರ್ ಪುತ್ರನಿಗೆ ನಾಮಕರಣ ಕಾರ್ಯಕ್ರಮ ನೆರವೇರಿತ್ತು. ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ಮಗುವಿಗೆ ನಾಮಕರಣ ಮಾಡಲಾಗಿತ್ತು. ಯದುವೀರ್ ಕುಟುಂಬ ನಾಮಕರಣ ಕಾರ್ಯಕ್ರಮ ಮುಗಿಸಿ ಮೈಸೂರು ಅರಮನೆಗೆ ಬಂದಿದ್ದು, ಇದೀಗ ಮೈಸೂರು ಅರಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಆದ್ಯವೀರ್ ನನ್ನು ನೋಡಿ ಅರಮನೆ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಆದ್ಯವೀರ್ ತುಂಬಾ ಚೆನ್ನಾಗಿದ್ದಾನೆ. ನಾಮಕರಣ ಮುಗಿಸಿ ಮೈಸೂರಿಗೆ ಆಗಮಿಸಿದ್ದೇವೆ. ಬೆಂಗಳೂರಿನಲ್ಲಿ ನಾಮಕರಣ ಮಾಡಿದ್ದು ನಮ್ಮ ಅನುಕೂಲಕ್ಕಾಗಿ ಅಷ್ಟೇ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಹೋಗಲಿದ್ದೇವೆ. ಆದ್ಯಾ ಎಂದರೆ ದುರ್ಗಿ, ಚಾಮುಂಡಿ ಎಂದರ್ಥ. ಮಗುವಿನ ಒಳಿತಿಗಾಗಿ ಆ ಹೆಸರು ಇಡಲಾಗಿದೆ. ಮಗು ಆದ್ಯವೀರ್ ಚೆನ್ನಾಗಿದ್ದಾನೆ. ಮುಂದಿನ ಕಾರ್ಯಕ್ರಮಗಳೆಲ್ಲ ಅಮ್ಮನ ಸೂಚನೆಯಂತೆ ನಡೆಯಲಿದೆ ಎಂದು ಯದುವೀರ್ ತಿಳಿಸಿದರು.

Related Articles

Leave a comment

Back to Top

© 2015 - 2017. All Rights Reserved.