ಫ್ರೆಂಡ್ಲಿ ಎನ್‌ಪೋರ‍್ಸ್’ಮೆಂಟ್ ಡ್ರೈವ್” ಹೆಸರಲ್ಲಿ ಸಂಚಾರ ಪೊಲೀಸರಿಂದ ತಿಳುವಳಿಕೆ ಪತ್ರ ಹಂಚಿಕೆ: ಕಾಟಾಚಾರಕ್ಕೆ ಕೆಲಸ ಮಾಡಿ ಮುಗಿಸಿದ ಪೊಲೀಸರು..!

BREAKING NEWS, Featured, Kannada News, Regional, Top News No Comments on ಫ್ರೆಂಡ್ಲಿ ಎನ್‌ಪೋರ‍್ಸ್’ಮೆಂಟ್ ಡ್ರೈವ್” ಹೆಸರಲ್ಲಿ ಸಂಚಾರ ಪೊಲೀಸರಿಂದ ತಿಳುವಳಿಕೆ ಪತ್ರ ಹಂಚಿಕೆ: ಕಾಟಾಚಾರಕ್ಕೆ ಕೆಲಸ ಮಾಡಿ ಮುಗಿಸಿದ ಪೊಲೀಸರು..! 178

ಮೈಸೂರು: ನಗರದಲ್ಲಿ ಸಾರ್ವಜನಿಕರು ಸಂಚಾರ ನಿಮಯಗಳನ್ನು ಪಾಲಿಸುವ ಮೂಲಕ ಅವರ ಮತ್ತು ಇತರರ ಸುರಕ್ಷತೆಗೆ ಸಹಕರಿಸಿ ಅವರುಗಳು ಜವಾಬ್ದಾರಿ ತೊರುವಂತೆ ಮಾಡಲು ಪೊಲೀಸ್ ಇಲಾಖೆಯಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಈ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾಗ್ಯೂ ಸಹಾ ಇನ್ನು ಕೆಲವು ಸಾರ್ವಜನಿಕರು ಸಂಚಾರ ನಿಮಯಗಳನ್ನು ಪಾಲನೆ ಮಾಡದೆ ಇರುವುದು ಕಂಡು ಬರುತ್ತಿದ್ದು ಅವರುಗಳ ಮನಃ ಪರಿವರ್ತನೆ ಮಾಡಿ ಸಂಚಾರ ನಿಯಮಗಳನ್ನ ಕಡ್ಡಾಯವಾಗಿ ಪಾಲನೆ ಮಾಡುವಂತೆ ಪ್ರೇರೇಪಿಸಲು ನಗರ ಪೊಲೀಸ್ ಆಯುಕ್ತರು ಫ್ರೆಂಡ್ಲಿ ಎನ್‌ಪೋರ‍್ಸ್‌ಮೆಂಟ್ ಡ್ರೈವ್ ”ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆದರೆ ನಿಯಮ ಪಾಲಿಸಿ ಎನ್ನುವ ಪೊಲೀಸ್ ಅಧಿಕಾರಿಗಳೇ ಕಾಟಾಚಾರದ ತಿಳುವಳಿಕೆ ಪತ್ರ ಹಂಚಿಕೆ ಮಾಡಿದ್ದಾರೆ.

ಹೌದು, ಮಾ. 2 ತಾರೀಖಿನಂದು ಬೆಳಿಗ್ಗೆ 9-00 ಗಂಟೆಯಿಂದ ರಾತ್ರಿ 9-00 ಗಂಟೆಯವರೆಗೆ ಮೈಸೂರು ನಗರಾದ್ಯಂತ ಎಲ್ಲಾ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಾರ್ವಜನಿಕರಿಗೆ ದಂಡ ವಿಧಿಸದೆ ಅವರುಗಳನ್ನು ಅತ್ಮೀಯವಾಗಿ ಮಾತನಾಡಿಸಿ ಅವರುಗಳಿಗೆ ಸಂಚಾರ ತಿಳುವಳಿಕೆ ಪತ್ರ” (ಟ್ರಾಫಿಕ್ ಅಡ್ವೈಸರಿ ಸ್ಲಿಪ್) ಗಳನ್ನು ನೀಡಿದ್ದರು. ಈ ವೇಳೆ ಒಟ್ಟು 7068 ಸಂಚಾರ ತಿಳುವಳಿಕೆ ಪತ್ರಗಳನ್ನು ವಿತರಿಸಿದ್ದರು ಎಂದು ಇಲಾಖೆ ತನ್ನ ಪ್ರಖಟಣೆಯಲ್ಲಿ ತಿಳಿಸಿದ್ದಾರೆ.

ವಿಷಯ ಏನಪ್ಪ ಅಂದ್ರೆ ತಿಳುವಳಿಕೆ ಪತ್ರ ಹಂಚಿಕೆ ಹೆಸರಲ್ಲಿ ಸಂಚಾರಿ ಪೊಲೀಸರು ಕಾಟಾಚಾರದ ಕೆಲಸ ಮಾಡಿದ್ದಾರೆ ಎಂಬುದು. ನಿಯಮ ಉಲ್ಲಂಘಿಸದವರಿಗೂ ಸಹ ತಿಳುವಳಿಕೆ ಪತ್ರ ಹಂಚಿದ್ದಾರೆ. ಆದರೆ ಈ ಪತ್ರ ಪಡೆದ ವ್ಯಕ್ತಿಗೆ ಮಾತ್ರ ಶಾಕ್..! ಏಕೆಂದರೆ ಸಾವಿರಾರು ರೂ. ನೀಡಿ ಐ.ಎಸ್.ಐ ಮಾರ್ಕ್‌ ಹೊಂದಿರುವ ಗುಣಮಟ್ಟದ ಹೆಲ್ಮೆಟ್ ಹಾಕಿದ್ದರೂ ಸಹ ಗುಣಮಟ್ಟದ ಹೆಲ್ಮೆಟ್ ದರಿಸಿಲ್ಲ ಎಂದು ಪತ್ರ ನೀಡಿದ್ದು ನೋಡಿ ಒಂದು ಕ್ಷಣ ಅವಕ್ ಆದದ್ದಂತು ನಿಜ ಎನ್ನುತ್ತಾರೆ ಹೆಸರೇಳಲು ಇಚ್ಚಿಸದ ವ್ಯಕ್ತಿ. ನಿಯಮ ಪಾಲಿಸಿ ಎಂದು ಹೇಳುವ ಪೊಲೀಸರೆ ಈ ರೀತಿಯ ಕಾಟಾಚಾರದ ಕೆಲಸ ಮಾಡಿ ಸಾರ್ವಜನಿಕರಿಗೆ ತಿಳುವಳಿಕೆ ಹೇಳುವುದು ಎಷ್ಟು ಸರಿ ಎಂಬುದಾಗಿ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಎಲ್ಲಾ ಪೊಲೀಸರು ಇದೇ ರೀತಿ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದೊಂದು ಸಣ್ಣ ವಿಚಾರವಾದರೂ ಸಹ ನಿಯಮ ಪಾಲಿಸಿ ಎನ್ನುವವರೆ ಈ ರೀತಿ ನಡೆದುಕೊಂಡರೆ ಎಷ್ಟು ಸರಿ. ಈ ರೀತಿಯ ಪ್ರಯತ್ನಗಳು ಇಲಾಖೆಯ ಉತ್ತಮ ನಿರ್ಧಾರ. ಆದರೆ ಆ ಪ್ರಯತ್ನ ನೈಜತೆಯಿಂದ ಕೂಡಿದ್ದರೆ ಮಾತ್ರ ಅದು ಯಶಸ್ವಿಯಾಗುತ್ತದೆ.

Related Articles

Leave a comment

Back to Top

© 2015 - 2017. All Rights Reserved.