ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಮತ್ತೆರಡು ಪದಕ ಬಾಚಿಕೊಂಡ ಭಾರತ

Kannada News, Sports No Comments on ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಮತ್ತೆರಡು ಪದಕ ಬಾಚಿಕೊಂಡ ಭಾರತ 13

ಕಿರ್ಗಿಸ್ತಾನ್‌: ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ಸ್‌ನಲ್ಲಿ ಭಾರತದ ಮತ್ತೆರಡು ಪದಕ ಬಾಚಿಕೊಂಡಿದೆ

ಬಜರಂಗ್ ಪೂನಿಯಾ ಹಾಗೂ ವಿನೋದ್ ಓಂಪ್ರಕಾಶ್ ಕುಮಾರ್ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತವು ಒಟ್ಟು ಎಂಟು ಪದಗಳನ್ನು ಗೆದ್ದ ಸಾಧನೆ ಮಾಡಿದೆ. ಇದರಲ್ಲಿ ಚಿನ್ನ ಹಾಗೂ ಆರು ಬೆಳ್ಳಿ ಪದಕಗಳು ಸೇರಿವೆ.

65 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಇರಾನ್‌ನ ಯೊನ್ಸ್ ಅಲಿಯಾಕ್ಬರ್ ಇಮಿಸಿಕೊಘೈಯಿ ವಿರುದ್ಧ ಪೂನಿಯಾ ಗೆಲುವು ದಾಖಲಿಸಿದರು. 70 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ವಿನೋದ್ ಕುಮಾರ್ ಕಿರ್ಗಿಸ್ತಾನ್‌ನವರೇ ಆದ ಎಲ್ಮಾನ್ ಡಾಗ್ಡುರ್ಬೆಕ್ ಅವರನ್ನು ಸೋಲಿಸಿ ಪದಕ ತನ್ನದಾಗಿಸಿಕೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.