ಮತ್ತೊಂದು ಘಾತಕ ಬೌನ್ಸರ್ ಎಸೆದ ಸೀನ್ ಅಬಾಟ್: ತಪ್ಪಿತು ಅನಾಹುತ;- ಅಷ್ಟಕ್ಕೂ ಈ ಬೌನ್ಸರ್ ಹುಟ್ಟಿಕೊಂಡ ರೋಚಕ ಕಥೆ ಗೊತ್ತಾ..!

Kannada News, Sports, Top News No Comments on ಮತ್ತೊಂದು ಘಾತಕ ಬೌನ್ಸರ್ ಎಸೆದ ಸೀನ್ ಅಬಾಟ್: ತಪ್ಪಿತು ಅನಾಹುತ;- ಅಷ್ಟಕ್ಕೂ ಈ ಬೌನ್ಸರ್ ಹುಟ್ಟಿಕೊಂಡ ರೋಚಕ ಕಥೆ ಗೊತ್ತಾ..! 24

ಮೆಲ್ಬೋರ್ನ್: ಆಸಿಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಬಲಿ ಪಡೆದ ವೇಗಿ ಸೀನ್ ಅಬಾಟ್ ಮತ್ತೊಂದು ಅಂತುಹುದೇ ಅಪಾಯಕಾರಿ ಎಸೆತ ಎಸೆದಿದ್ದಾರೆ.

2014ರ ನವೆಂಬರ್‌ನಲ್ಲಿ ನಡೆದಿದ್ದ ಫಿಲಿಪ್ ಹ್ಯೂಸ್ ಸಾವಿನ ಪ್ರಕರಣವನ್ನುನೆನಪಿಸುವ ರೀತಿಯಲ್ಲೆ ಮತ್ತೋರ್ವ ಬ್ಯಾಟ್ಸಮನ್ ತಲೆಗೆ ಬೌನ್ಸರ್ ಬಂದು ತಗುಲಿದೆ. ವಿಕ್ಟೋರಿಯಾ ಬ್ಯಾಟ್ಸ್ ಮನ್ ವಿಕ್ಟೋರಿಯಾ ಬ್ಯಾಟ್ಸ್ ಮನ್ ವೀಲ್ ಫುಕೋಸ್ಕಿ ಎಂಬುವವರೆ ಗಾಯಗೊಂಡವರು.

ಅದೃಷ್ಟವಶಾತ್ ಅವರ ಎಸೆತಕ್ಕೆ ಈ ಬಾರಿ ಆಟಗಾರ ಬಲಿಯಾಗಿಲ್ಲ. ತಲೆಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ಆಸ್ಟ್ರೇಲಿಯಾದ ಶೆಫೀಲ್ಟ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ಪರ ಆಡುತ್ತಿರುವ ಫಾಸ್ಟ್ ಬೌಲರ್ ಸೀನ್ ಅಬೋಟ್, ಬೌನ್ಸರ್ ಹಾಕಿದ್ದಾರೆ. ಚೆಂಡು ನೇರವಾಗಿ ಫುಕೋಸ್ಕಿಗೆ ಬಡಿದು ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಜೀವಕ್ಕೆ ಮಾರಕವಾದ ಬೌನ್ಸರ್‌ ಎಸೆತ ಕ್ರಿಕೆಟ್‌ನಲ್ಲಿ ಕಪ್ಪುಚುಕ್ಕೆಯಂತಾಗಿದೆ. ಅಷ್ಟಕ್ಕೂ ಈ ಘಾತಕ ಬೌನ್ಸರ್ ಹುಟ್ಟಿಕೊಂಡ ರೋಚಕ ಕಥೆ ಗೊತ್ತಾ..? ಇಲ್ಲಿದೆ ಅದರ ಮಾಹಿತಿ…!

ಅದು 1930ರ ಕಾಲಘಟ್ಟ. ಇಂಗ್ಲೆಂಡ್‌ ಪ್ರವಾಸದಲ್ಲಿದ್ದ ಆಸಿಸ್ ಪಡೆ, ಇಂಗ್ಲೆಂಡ್‌ ವಿರುದ್ಧ 5 ಟೆಸ್ಟ್‌ ಪಂದ್ಯಗಳಲ್ಲಿ 2-1ರಿಂದ ಸರಣಿ ಜಯಿಸಿದಾಗ ಕ್ರಿಕೆಟ್‌ ಜನಕರ ನಾಡಿನಲ್ಲಿ ಸೂತಕದ ಛಾಯೆ ಆವರಿಸಿತ್ತು. ತಾವೇ ಕ್ರಿಕೆಟ್‌ನಲ್ಲಿ ಎಲ್ಲಾ ಎಂದು ಮೆರೆಯುತ್ತಿದ್ದ ಬ್ರಿಟಿಷರಿಗೆ ಬ್ಯಾಟಿಂಗ್‌ ಹೇಗೆ ಮಾಡಬೇಕೆಂದು ತೋರಿಸಿಕೊಟ್ಟ ಆಸ್ಟ್ರೇಲಿಯಾದ ಡಾನ್‌ ಬ್ರಾಡ್‌ಮನ್‌ ಆ ಸರಣಿಯಲ್ಲಿ 139.14ರ ಸರಾಸರಿಯಲ್ಲಿ 974 ರನ್‌ ಚಚ್ಚಿ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದ್ದು ಕ್ರಿಕೆಟ್‌ನಲ್ಲಿ ಇತಿಹಾಸ.

ಈ ಬ್ಯಾಟಿಂಗ್‌ ಮಾಂತ್ರಿಕ ಡಾನ್‌ ಬ್ರಾಡ್‌ಮನ್‌ರನ್ನು ನಂತರದ ದಿನಗಳಲ್ಲಿ ಎದುರಿಸುವುದು ಹೇಗೆಯೆಂಬ ಚರ್ಚೆ ಪ್ರಾರಂಭವಾದವು. ಅದೇ ಸರಣಿಯಲ್ಲಿನ ಓವಲ್‌ ಪಂದ್ಯದಲ್ಲಿ 232 ರನ್‌ ಗಳಿಸಿದ್ದರೂ ಸಹ ಮಳೆಯಿಂದ ಹಾಗೂ ಸಹಜ ಎತ್ತರಕ್ಕಿಂತ ಮೇಲೆ ಹೋಗುತ್ತಿದ್ದ ಬಾಲ್‌ ಎದುರಿಸುವಲ್ಲಿ ಡಾನ್‌ ಹಿನ್ನಡೆ ಅನುಭವಿಸಿದ್ದರು ಎಂಬುದನ್ನು ಇಂಗ್ಲೆಂಡ್‌ನ‌ ಮಾಜಿ ಆಟಗಾರ ಪೆರ್ಸಿ ಫೆಂಡರ್‌ ಮನಗಂಡಿದ್ದರು. ಓವಲ್‌ ಪಂದ್ಯದ ಚಿತ್ರೀಕರಣದ ತುಣುಕುಗಳನ್ನು ನೋಡಿದ ಇಂಗ್ಲೆಂಡ್‌ ತಂಡದ ನಾಯಕ ಡೌಗ್ಲಾಸ್‌ ಜಾರ್ಡೈನ್‌ ಮುಂಬರುವ ಸರಣಿಯಲ್ಲಿ ಹೇಗಾದರೂ ಮಾಡಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲ್ಲಲೇ ಬೇಕೆಂಬ ಉದ್ದೇಶದಿಂದ ತನ್ನ ತಂತ್ರಗಾರಿಕೆಗೆ ಆರಂಭಿಸಿದರು.

ದೇಹಕ್ಕೆ ಇಲ್ಲವೇ ಮುಖಕ್ಕೆ ಅಪ್ಪಳಿಸುವಂತಹ ಬಾಲ್‌ಗ‌ಳನ್ನು ಎದುರಿಸುವಲ್ಲಿ ಬ್ರಾಡ್‌ಮನ್‌ ಸೇರಿದಂತೆ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಹಿನ್ನಡೆ ಅನುಭವಿಸುವರು ಎಂಬ ಸತ್ಯಕಂಡುಕೊಂಡ ಡೌಗ್ಲಾಸ್‌ ಜಾರ್ಡೈನ್‌ ಮತ್ತು ಪೆರ್ಸಿ ಫೆಂಡರ್‌ ಹೊಸ ತಂತ್ರ ರೂಪಿಸುತ್ತಾರೆ. 1932-33ರ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡಲಿದ್ದ ಇಂಗ್ಲೆಂಡ್‌ ಬೌಲರ್‌ಗಳಿಗೆ ಈ ಬಗ್ಗೆ ಪೂರ್ವ ತರಬೇತಿ ನೀಡುತ್ತಾರೆ.

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಬೌಲ್‌ ಮಾಡುವಾಗ ಲೆಗ್‌ ಸ್ಟಂಪ್‌ ಅನ್ನು ಗುರಿಯಾಗಿರಿಸಿ ಬೌಲ್‌ ಮಾಡಿ ಹಾಗೆಯೇ ಸಾಧ್ಯವಾದಷ್ಟು ನಿಮ್ಮ ಗುರಿ ಬ್ಯಾಟ್ಸ್‌ಮನ್‌ಗಳ ದೇಹ ಮತ್ತು ಮುಖದತ್ತ ಇರಲಿ ಎಂದಾಗ ಹುಟ್ಟಿದ್ದೇ ಇಂದಿನ ಬೌನ್ಸರ್‌. ಅಂದಿನ ದಿನಗಳಲ್ಲಿ ಈ ಶಾರ್ಟ್‌ ಪಿಚ್‌ ಎಸೆಯುವ ಅಭ್ಯಾಸವೇ ಇಲ್ಲದ ಇಂಗ್ಲೆಂಡ್‌ ಬೌಲರ್‌ಗಳಿಗೆ, ಎಲ್ಲಿ ಪಿಚ್‌ ಮಾಡಿದರೆ ಬಾಲ್‌ ಅನ್ನು ಬೌನ್ಸರ್‌ ಬಾಲ್‌ ಆಗಿ ಪರಿವರ್ತಿಸಬಹುದು ಎಂಬುದರ ಬಗ್ಗೆ ಡೌಗ್ಲಾಸ್‌ ಜಾರ್ಡೈನ್‌ ಮಾಹಿತಿ ನೀಡಿ ಅಭ್ಯಾಸಕ್ಕೆ ಮುಂದಾಗುತ್ತಾರೆ. ಪ್ರಾಕ್ಟೀಸ್‌ನಲ್ಲಿ ಲೆಗ್‌ ಸ್ಟಂಪ್‌ ಗುರಿಯಾಗಿರಿಸಿಕೊಂಡು ಪಿಚ್‌ನ ಮಧ್ಯ ಭಾಗಕ್ಕೆ ಬಾಲನ್ನು ಅಪ್ಪಳಿಸುವಂತೆ ಬೌಲ್‌ ಮಾಡಲು ತನ್ನ ಬೌಲರ್‌ಗಳಿಗೆ ಡೌಗ್ಲಾಸ್‌ ಜಾರ್ಡೈನ್‌ ಸೂಚಿಸುತ್ತಾನೆ. ಅಂದಿನಿಂದ ಆರಂಭವಾಯ್ತು ನೋಡಿ ಘಾತಕ ಬೌನ್ಸರ್’ನ ಆರ್ಭಟ..

1932-33ರ ಆಸ್ಟ್ರೇಲಿಯಾ – ಇಂಗ್ಲೆಂಡ್‌ ಸರಣಿ

ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದ ಇಂಗ್ಲೆಂಡ್‌ ತಂಡ ಸರಣಿ ಪ್ರಾರಂಭವಾಗುತ್ತಲೇ ತನ್ನ ತಂತ್ರ ಪ್ರಯೋಗಕ್ಕೆ ಮುಂದಾಗಲಿಲ್ಲ. ಮೊದಲೆರಡು ಟೆಸ್ಟ್‌ಗಳ ಫ‌ಲಿತಾಂಶ ಸಮ ಸಮವಾಗಿದ್ದವು. ನಂತರ ಪ್ರಾರಂಭವಾಯಿತು ಅಡಿಲೇಡ್‌ ಓವಲ್‌ನಲ್ಲಿ 3ನೇ ಟೆಸ್ಟ್‌. ಡೌಗ್ಲಾಸ್‌ ಜಾರ್ಡೈನ್‌ ತನ್ನ ದೈತ್ಯ ಬೌಲರ್‌ಗಳಾದ ಹೆರಾಲ್ಡ್‌ ಲಾರ್‌ ವುಡ್‌ ಹಾಗೂ ಬಿಲ್‌ ವೋಚೆಗೆ ಪಂದ್ಯ ಪ್ರಾರಂಭವಾದ ಕೆಲ ಸಮಯದ ನಂತರ ತಮ್ಮ ಹೊಸ ತಂತ್ರ ಬಾಡಿಲೈನ್‌ ಅಟ್ಯಾಕ್‌ ಪ್ರಯೋಗಕ್ಕೆ ಮುಂದಾಗುವಂತೆ ಸೂಚಿಸುತ್ತಾನೆ. ಇದಾವುದರ ಕಲ್ಪನೆಯೇ ಇಲ್ಲದ ಆಸ್ಟ್ರೇಲಿಯನ್‌ ಪಡೆ ಆ ಸಮಯದವರೆಗೆ ಅದ್ಭುತವಾಗಿಯೇ ಬ್ಯಾಟ್‌ ಬೀಸುತ್ತಿತ್ತು.

ಆದರೆ ಶುರುವಾಯಿತಲ್ಲ ಮಾರಕ ಇಂಗ್ಲೆಂಡ್‌ ದಾಳಿ, ತರಗೆಲೆಗಳಂತಾಗಿ ಹೋಯಿತು ಆಸ್ಟ್ರೇಲಿಯನ್‌ ಬ್ಯಾಟಿಂಗ್‌ ದಂಡು, ದೇಹಕ್ಕೆ ಇಲ್ಲವೇ ಮುಖಕ್ಕೆ ಪೆಟ್ಟು ತಿನ್ನಬೇಕು, ಇಲ್ಲವೇ ತಪ್ಪಿಸಿಕೊಳ್ಳುವ ಭರದಲ್ಲಿ ಸ್ಟಂಪಿಂದ ಸರಿದರೆ ಕ್ಲೀನ್‌ ಬೌಲ್ಡ್‌, ಇಲ್ಲವೇ ಬಾಲ್‌ ಅನ್ನು ಎಲ್ಲೆಂದರಲ್ಲಿ ಹೊಡೆಯಲು ಹೋಗಿ ಕ್ಯಾಚ್‌ ಇತ್ತು ಫೆವಿಲಿಯನ್ನತ್ತ ಹೆಜ್ಜೆಹಾಕಬೇಕು. ಗೊತ್ತುಗುರಿ ಇಲ್ಲದಂತಹ ಪರಿಸ್ಥಿತಿ ಆಸಿಸ್, ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲಾ ಗಾಯಾಳುಗಳಾಗುತ್ತಾ ಪೆವಿಲಿ ಯನ್‌ಗೆ ಪರೇಡ್‌ ನಡೆಸಿದ್ದ ದೃಶ್ಯ ಆಸ್ಟ್ರೇಲಿಯನ್ನರಲ್ಲಿ ಕಿಚ್ಚನ್ನೇ ಹಚ್ಚಿತು. ಆ ಪಂದ್ಯದಲ್ಲಿ ಇಂಗ್ಲೆಂಡ್‌ 338 ರನ್‌ಗಳಿಂದ ಜಯ ಸಾಧಿಸಿತು.

ತಂತ್ರಕ್ಕೆ ಪ್ರತಿತಂತ್ರ ಎನ್ನುವಂತೆ ನಂತರದ ಎರಡು ಟೆಸ್ಟ್‌ಗಳಲ್ಲಿ ಡಾನ್‌ಬ್ರಾಡ್‌ ಮನ್‌ ಮುಖದೆತ್ತರಕ್ಕೆ ಬರುತ್ತಿದ್ದ ಬಾಲ್‌ಗ‌ಳಿಗೆ ತಕ್ಕ ಶಾಸ್ತಿ ಎನ್ನುವಂತೆ ಹುಕ್‌ ಶಾಟ್‌ ಹೊಡೆತದ ಜನನಕ್ಕೆ ಕಾರಣರಾಗಿ ಸರಣಿಯಲ್ಲಿ ತ್ರಿಶತಕ ಸೇರಿದಂತೆ 3 ಶತಕ ದಾಖಲಿಸಿ ಆಸ್ಟ್ರೇಲಿಯಾ ಮುಡಿಗೆ ಸರಣಿ ಗೆಲ್ಲಲು ಕಾರಣರಟದ್ದು ಇಂದು ಸುವರ್ಣ ಇತಿಹಾಸ…

Related Articles

Leave a comment

Back to Top

© 2015 - 2017. All Rights Reserved.