ಸಾಂಸ್ಕೃತಿಕ ನಗರಿಯಲ್ಲಿ ನೀರಿಗೆ ಆಹಾಕಾರ: ಕಾಲಿ ಕೊಡ ಹಿಡಿದು ಸಾರ್ವಜನಿಕರ ಪ್ರತಿಭಟನೆ

BREAKING NEWS, Kannada News, Regional No Comments on ಸಾಂಸ್ಕೃತಿಕ ನಗರಿಯಲ್ಲಿ ನೀರಿಗೆ ಆಹಾಕಾರ: ಕಾಲಿ ಕೊಡ ಹಿಡಿದು ಸಾರ್ವಜನಿಕರ ಪ್ರತಿಭಟನೆ 28

ಮೈಸೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ನಗರದ ಎನ್.ಆರ್ ಮೊಹಲ್ಲಾದ ಗಣಪತಿ ದೇವಸ್ಥಾನದ ಎದುರು ಕಾಲಿ ಕೊಡ ಹಿಡಿದು ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಉಪಮೇಯರ್ ರತ್ನಪ್ರಭ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಈ ಕೂಡಲೇ ಪಾಲಿಕೆ ಅಧಿಕಾರಿಗಳು ನೀರು ಪೂರೈಸುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಸಮರ್ಪಕ ಕುಡಿಯುವ ನೀರು ಪೂರೈಸದ ಹಿನ್ನಲೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸದ ಹಿನ್ನಲೆ ಧರಿಣಿ ಕೈಗೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.