2018ನೇ ಸಾಲಿನ ಆಸ್ಕರ್‌ ಪ್ರಶಸ್ತಿ ಪ್ರದಾನ: ‘ದ ಶೇಪ್ ಆಫ್ ವಾಟರ್’ ಅತ್ಯುತ್ತಮ ಚಿತ್ರ

News No Comments on 2018ನೇ ಸಾಲಿನ ಆಸ್ಕರ್‌ ಪ್ರಶಸ್ತಿ ಪ್ರದಾನ: ‘ದ ಶೇಪ್ ಆಫ್ ವಾಟರ್’ ಅತ್ಯುತ್ತಮ ಚಿತ್ರ 31

ಲಾಸ್’ಏಂಜೆಲಿಸ್: 2018ನೇ ಸಾಲಿನ 90ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಅಲ್ಲದೆ ಈ ಚಿತ್ರದ ನಿರ್ದೇಶಕ ಗಿಲ್ಲೆರ್ಮೊ ಡೆಲ್ ಟೊರೊ ಈ ಸಾಲಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ಅತ್ಯುತ್ತಮ ಚಿತ್ರ ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಶೇಪ್ ಆಫ್ ವಾಟರ್ ಪ್ರಶಸ್ತಿ ಗಳಿಸಿಕೊಂಡಿದೆ.

ಅಮೆರಿಕದ ಮನರಂಜನಾ ನಗರಿ ಲಾಸ್‍ಏಂಜೆಲಿಸ್‍ನಲ್ಲಿ ನಿನ್ನೆ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಚಿತ್ರೋದ್ಯಮದ ಸರ್ವಶ್ರೇಷ್ಠ ಸಾಧಕರಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಡಾರ್ಕೆಸ್ಟ್ ಅವರ್ ಸಿನಿಮಾದ ಮನೋಜ್ಞ ಅಭಿನಯಕ್ಕಾಗಿ ಗ್ಯಾರಿ ಓಲ್ಡ್‍ಮ್ಯಾನ್ ಶ್ರೇಷ್ಠ ನಟ ಹಾಗೂ ಥ್ರೀ ಬಿಲ್‍ಬೋಡ್ರ್ಸ್ ಔಟ್‍ಸೈಡ್ ಎಬ್ಬಂಗ್, ಮಿಸ್ಸೂರಿ ಸಿನಿಮಾದ ಅದ್ಭುತ ನಟನೆಗಾಗಿ ಫ್ರಾನ್ಸೆಸ್ ಮ್ಯಾಕ್‍ಡೊರ್ಮಾಂಡ್ ಶ್ರೇಷ್ಠ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಐ, ಟೊನ್ಯಾ ಸಿನಿಮಾದ ಉತ್ತಮ ಅಭಿನಯಕ್ಕಾಗಿ ಅಲಿಸನ್ ಜಾನ್ನೇ ಅತ್ಯುತ್ತಮ ಪೋಷಕ ನಟಿ ಮತ್ತು ಥ್ರೀ ಬಿಲ್‍ಬೋಡ್ರ್ಸ್ ಔಟ್‍ಸೈಡ್ ಎಬ್ಬಂಗ್, ಮಿಸ್ಸೂರಿ ಸಿನಿಮಾದ ಪ್ರತಿಭಾವಂತ ನಟನೆಗಾಗಿ ಸ್ಯಾಮ್ ರಾಕ್‍ವೆಲ್ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.

ಭಾರತದ ಪ್ರತಿಭಾವಂತ ನಟ ಅಲಿ ಫಜಲ್ ಹಾಗೂ ಬ್ರಿಟಿಷ್ ತಾರೆ ಜುಡಿ ಡೆಂಚ್ ಅಭಿನಯದ ವಿಕ್ಟೋರಿಯಾ ಅಂಡ್ ಅಬ್ದುಲ್ ಸಿನಿಮಾ ಅತ್ಯುತ್ತಮ ಮೇಕಪ್, ಹೇರ್‍ಸ್ಟೈಲ್ ಮತ್ತು ಕಾಸ್ಟ್ಯೂಮ್ ಡಿಸೈಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತಾದರೂ, ಆ ಪ್ರಶಸ್ತಿಗಳು ಡಾರ್ಕೆಸ್ಟ್ ಹವರ್ ಮತ್ತು ಫ್ಯಾಂಟಮ್ ಥ್ರೆಡ್ ಸಿನಿಮಾಗಳ ಪಾಲಾದವು.

ಇತರ ಪ್ರಶಸ್ತಿಗಳು:

 • ಉತ್ತಮ ಮೂಲ ಕಥೆ-ಗೆಟೌಟ್,
 • ಉತ್ತಮ ಚಿತ್ರಕಥೆ-ಕಾಲ್ ಮಿ ಬೈ ಯುವರ್ ನೇಮ್,
 • ಉತ್ತಮ ಅನಿಮೇಷನ್ ಸಿನಿಮಾ-ಕೋಕೋ,
 • ಉತ್ತಮ ವಿದೇಶಿ ಭಾಷೆ ಚಿತ್ರ-ಎ ಫ್ಯಾಂಟಾಸ್ಟಿಕ್ ವುಮೆನ್(ಚಿಲಿ),
 • ಉತ್ತಮ ಮೂಲ ಗಾಯನ-ರಿಮೆಂಬರ್ ಮೀ, ಕೋಕೋ,
 • ಉತ್ತಮ ಸಾಕ್ಷ್ಯಚಿತ್ರ-ಇಕಾರಸ್,
 • ಉತ್ತಮ ಕಿರು ಸಾಕ್ಷ್ಯಾಚಿತ್ರ-ಹೆವನ್ ಇಸ್ ಎ ಟ್ರಾಫಿಕ್ ಜಾಮ್ ಆನ್ ದಿ 405,
 • ಉತ್ತಮ ಲೈವ್ ಆ್ಯಕ್ಷನ್ ಶಾರ್ಟ್-ದಿ ಸೈಲೆಂಟ್ ಚೈಲ್ಡ್,
 • ಉತ್ತಮ ಅನಿಮೇಷನ್ ಕಿರುಚಿತ್ರ-ಡಿಯರ್ ಬ್ಯಾಸ್ಕೆಟ್ ಬಾಲ್,
 • ಉತ್ತಮ ಚಿತ್ರ ಸಂಕಲನ,
 • ಉತ್ತಮ ಶಬ್ಧ ಸಂಕಲನ ಮತ್ತು ಉತ್ತಮ ಶಬ್ಧ ಸಂಯೋಜನೆ-ಡನ್‍ಕ್ರಿಕ್(3 ಪ್ರಶಸ್ತಿಗಳು),
 • ಉತ್ತಮ ಛಾಯಾಗ್ರಹಣ ಮತ್ತು ಉತ್ತಮ ದೃಶ್ಯ ಪರಿಣಾಮ-ಬ್ಲೇಡ್ ರನ್ನರ್.

Related Articles

Leave a comment

Back to Top

© 2015 - 2017. All Rights Reserved.