ಸರ್ಕಾರಿ ಕೆಲಸ ಸಿಗದಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆ

Crime, Kannada News, Regional No Comments on ಸರ್ಕಾರಿ ಕೆಲಸ ಸಿಗದಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆ 59

ಚಾಮರಾಜನಗರ: ಸರ್ಕಾರಿ ಕೆಲಸ ಸಿಗದಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಚಾಮಲಪುರದಲ್ಲಿ ಜರುಗಿದೆ.

ಚಾಮಲಪುರದ ಮಧು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಉತ್ತಮ ವಿದ್ಯಾಭ್ಯಾಸ ಮಾಡಿದ್ದ ಮಧು ಸರ್ಕಾರಿ ಹುದ್ದೆಗೆ ಅರ್ಜಿಗಳನ್ನು ಹಾಕಿದ್ದು, ಕೆಲಸ ಸಿಗುತ್ತದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದನು. ಹಲವ ಬಾರಿ ಪ್ರಯತ್ನಿಸಿದರೂ ಸರ್ಕಾರಿ ನೌಕರಿಸಿಗದ ಕಾರಣ ಮನನೊಂದು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. 

ಅಲ್ಲದೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಮಧುನಿಂದ ಚಾಮಣ್ ಮತ್ತು ಶಶಿಧರ್ ಎಂಬವರು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಹಣ ನೀಡಿ ವರ್ಷಗಳು ಕಳೆದರೂ ಯುವಕನಿಗೆ ಸರ್ಕಾರಿ ಕೆಲಸ ಕೊಡಿಸುವ ಸೂಚನೆಗಳು ದೊರಕಲಿಲ್ಲ. ಹೀಗಾಗಿ ಮಧು ಚಾಮಣ್ ಮತ್ತು ಶಶಿಧರ್ ಅವರನ್ನು ವಿಚಾರಿಸಿದ್ದಾನೆ. ಆದರೆ ಮಧುಗೆ ಅವರಿಂದ ಸರಿಯಾದ ಉತ್ತರಗಳು ಬಂದಿಲ್ಲ. ಹೀಗಾಗಿ ಮಧು ಖಿನ್ನತೆಗೊಳಗಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.