ವಿಶ್ವಕಪ್ ಶೂಟಿಂಗ್: ಭಾರತದ ಮನು ಬಾಕರ್ ಗೆ ಚಿನ್ನ

Kannada News, Sports No Comments on ವಿಶ್ವಕಪ್ ಶೂಟಿಂಗ್: ಭಾರತದ ಮನು ಬಾಕರ್ ಗೆ ಚಿನ್ನ 14

ಮೆಕ್ಸಿಕೋ: ಇಲ್ಲಿ ನಡೆಯುತ್ತಿರುವ ವರ್ಷದ ಪ್ರಥಮ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್‍ಎಸ್‍ಎಫ್)ದ ಸ್ಪರ್ಧೆಗಳಲ್ಲಿ ಎರಡನೇ ದಿನವೂ ಭಾರತದ ಪ್ರಾಬಲ್ಯ ಮುಂದುವರಿದಿದೆ.

ಮಹಿಳೆಯರ 10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಬಾಕರ್ ಚಿನ್ನ ಗೆದ್ದಿದ್ದಾರೆ. ಅಕ್ಟೋಬರ್‍ನಲ್ಲಿ ಅರ್ಜೆಂಟೈನಾದ ಬ್ಯೂನಸ್ ಏರಿಸ್‍ನಲ್ಲಿ ನಡೆಯಲಿರುವ 2018ರ ಯೂತ್ ಒಲಿಂಪಿಕ್ಸ್ ಗೇಮ್ಸ್‍ನಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಮನು, ನಿನ್ನೆ ನಡೆದ ಫೈನಲ್‍ನಲ್ಲಿ ಮೆಕ್ಸಿಕೋದ ಅಲೆಜಾಂಡ್ರ ಝಾವಲಾ ಅವರನ್ನು ಮಣಿಸಿ ಬಂಗಾರದ ಗೆಲುವಿನ ನಗೆ ಬೀರಿದರು. ಮನು ಒಟ್ಟು 237.5 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರು.   ಭಾರತ ಈವರೆಗೆ ಐದು ಪದಕಗಳನ್ನು ಗಳಿಸಿದ್ದು, ಎರಡು ಚಿನ್ನ ಮತ್ತು ಮೂರು ಕಂಚು ಮೆಡಲ್‍ಗಳು ಸೇರಿವೆ.

Related Articles

Leave a comment

Back to Top

© 2015 - 2017. All Rights Reserved.