ತಾವೇ ಕಟ್ಟಿದ ಪಕ್ಷದಿಂದಲೇ ಹೊರಬರಲು ನಿರ್ಧರಿಸಿದರಾ ಉಪೇಂದ್ರ..? ನಿರ್ಧಾರ ಘೋಷಣೆಗೂ ಮುನ್ನವೇ ಉಪ್ಪಿ ಉಚ್ಚಾಟಾನೆ..?

BREAKING NEWS, Kannada News, Regional, Top News No Comments on ತಾವೇ ಕಟ್ಟಿದ ಪಕ್ಷದಿಂದಲೇ ಹೊರಬರಲು ನಿರ್ಧರಿಸಿದರಾ ಉಪೇಂದ್ರ..? ನಿರ್ಧಾರ ಘೋಷಣೆಗೂ ಮುನ್ನವೇ ಉಪ್ಪಿ ಉಚ್ಚಾಟಾನೆ..? 34

ಬೆಂಗಳೂರು: ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿಯಾಗಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಪಕ್ಷದಲ್ಲೇ ಹೊರಹೋಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಪಕ್ಷದ ರಾಷ್ಟ್ರೀಯ ಸಮಿತಿಯಲ್ಲಿ ತಮ್ಮ ಕುಟುಂಬದವರಿಗೇ ಆಯಕಟ್ಟಿನ ಹುದ್ದೆಗೆ ಉಪೇಂದ್ರ ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ ಉಪೇಂದ್ರ ಅವರನ್ನೇ ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಾರ್ಚ್ 3ರಂದು ನಡೆದ ಕೆಪಿಜೆಪಿ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ರಾಷ್ಟ್ರೀಯ ಸಮಿತಿಯ 13 ಸದಸ್ಯರ ಪೈಕಿ 3 ಸ್ಥಾನಗಳನ್ನ ಹೆಂಡತಿ, ಅಣ್ಣ ಸೇರಿ ಕುಟುಂಬದವರಿಗೇ ನೀಡಲು ಉಪೇಂದ್ರ ಪಟ್ಟು ಹಿಡಿದಿದ್ದರು. ಇದಕ್ಕೆ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಪಕ್ಷಕ್ಕೂ ನನಗೂ ಸಂಬಂಧವಿಲ್ಲ ಎಂದು ಉಪೇಂದ್ರ ಎದ್ದು ಹೋದರು ಎಂದು ಹೇಳಲಾಗಿದೆ.

ಸ್ವಪಕ್ಷದ ವಿರುದ್ಧವೇ ಮುನಿಸಿಕೊಂಡಿರುವ ಉಪೇಂದ್ರ ತಾವೇ ಕಟ್ಟಿದ ಪಕ್ಷದಿಂದಲೇ ಹೊರಬರಲು ನಿರ್ಧರಿಸಿದ್ದರು ಎನ್ನಲಾಗಿದೆ. ನಿನ್ನೆಯಷ್ಟೇ ಈ ಬಗ್ಗೆ ಟ್ವೀಟ್ ಮಾಡಿದ್ದ ಉಪೇಂದ್ರ. ಪ್ರಜಾಕೀಯ ಮತ್ತು ರಾಜಕೀಯದ ನಡುವೆ ಬಹುದೊಡ್ಡ ಪರೀಕ್ಷೆ . ಇದೇ ತಿಂಗಳ 6ರಂದು ಬಹಿರಂಗ ಆಗುತ್ತದೆ. ದಯವಿಟ್ಟು ಕಾದುನೋಡಿ ಎಂದು ಟ್ವೀಟ್​ನಲ್ಲಿ ತಿಳಿಸಿದ್ದರು.

ಉಪೇಂದ್ರ ಪಕ್ಷದಿಂದ ಹೊರಬರುವ ಘೋಷಣೆ ಮಾಡುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಇಂದು ಸಂಜೆ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ನೇತೃತ್ವದಲ್ಲಿ ಹಿರಿಯ ಮುಖಂಡರು ಸಭೆ ಸೇರುತ್ತಿದ್ದು, ಉಪೇಂದ್ರ ಪಕ್ಷದಿಂದ ಹೊರಬರುವ ಘೋಷಣೆ ಮಾಡುವ ಮುನ್ನವೇ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.