ನನ್ನ ಅವಧಿಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪುತ್ಥಳಿ ಅನಾವರಣಗೊಂಡದ್ದು ನನ್ನ ಸೌಭಾಗ್ಯ: ಜಿ.ಟಿ ದೇವೇಗೌಡ

Kannada News, Regional No Comments on ನನ್ನ ಅವಧಿಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪುತ್ಥಳಿ ಅನಾವರಣಗೊಂಡದ್ದು ನನ್ನ ಸೌಭಾಗ್ಯ: ಜಿ.ಟಿ ದೇವೇಗೌಡ 116

ಮೈಸೂರು: ನಾನು ಈ ಕ್ಷೇತ್ರದ ಶಾಸಕನಾಗಿರುವಾಗ, ನನ್ನ ಅವಧಿಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪುತ್ಥಳಿ ಅನಾವರಣದ ಪುಣ್ಯ ಕಾರ್ಯವಾಗುತ್ತಿರುವುದು ನನ್ನ ಸೌಭಾಗ್ಯ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಹೇಳಿದರು.

ಮೈಸೂರಿನ ರಾಮಕೃಷ್ಣ ನಗರದಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ನಿರ್ಮಿಸಿರುವ ಶ್ರೀ ರಾಮಕೃಷ್ಣ ಪರಮಹಂಸರ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಜಿಟಿಡಿ, ಭಾರತ ಕಂಡ ವಿಶ್ವಶ್ರೇಷ್ಠ ಗುರು ರಾಮಕೃಷ್ಣ ಪರಮಹಂಸರು. ಭಾರತದ ಪ್ರಸಿದ್ಧ ಧಾರ್ಮಿಕ ನೇತಾರರಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ಸಿದ್ಧಾಂತವನ್ನು ಬೋದಿಸಿದರಲ್ಲದೆ ಎಲ್ಲಾ ಧರ್ಮಗಳು ಒಂದೇ ಗುರಿಯತ್ತ ಒಯ್ಯತ್ತದಲವೆ ಎಂದು ನಂಬಿದ್ದರು.

16ನೇ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟವರಲ್ಲಿ ಇವರೂ ಒಬ್ಬರು. ಪರಮಹಂಸರು ಪರಮ ದೈವ ಭಕ್ತರು. ಯಾವಾಗಲೂ ದೇವರನ್ನು ಕುರಿತು ಚಿಂತಿಸುತ್ತಿದ್ದರು. ಎಲ್ಲರಲ್ಲಿಯೂ ಅವರಿಗೆ ದೇವರ ಭಾವನೆ ಇತ್ತು. ಎಲ್ಲಾ ಧರ್ಮ, ದೇವರುಗಳನ್ನು ಗೌರವದಿಂದ ನೋಡುತ್ತಿದ್ದರು. ಅವರು ಪತ್ನಿಯನ್ನು ಸಹ ತಾಯಿಯ ಭಾವನೆಯಿಂದ ನೋಡುತ್ತಿದ್ದರು.

ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ, ನಂಬಿಕೆಯ ಮೇಲೆ ಆಳವಾದ ಪ್ರಭಾವ ಬೀರಿದೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು ಎಂದು ತಿಳಿಸಿದರು.

ಈ ಭಾಗದ ತಾವೆಲ್ಲರೂ ಪುಣ್ಯವಂತರು. ಇಂದು ಈ ಪುತ್ಥಳಿ ಇರುವ ಜಾಗ ಒಂದು ಧಾರ್ಮಿಕ ಕ್ಷೇತ್ರವಾಗಿದೆ. ಸುಂದರ ನಂದನ ವನವಾಗಿದೆ ಇದನ್ನು ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಇದರ ಶುಚಿತ್ವ, ಸೌಂದರ್ಯ ಉಳಿಸುವಂತಹದ್ದು ಪ್ರತಿಯೊಬ್ಬ ಜವಬ್ದಾರಿಯಾಗಿದೆ. ರಾಮಕೃಷ್ಣ ಪರಮಹಂಸ ಆದರ್ಶಗಳನ್ನ ವಿವೇಕಾನಂದರ ತತ್ವಾದರ್ಶಗಳನ್ನ ನಾವೆಲ್ಲರೂ ಪೂರ್ಣವಾಗಿ ಓದುವ ಮೂಲಕ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆದಾಗ ಮಾತ್ರ ಇವೆಲ್ಲದಕ್ಕೂ ಸಾರ್ಥಕ್ಯ ಸಿಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಸಂಸದ ಧೃವನಾರಾಯಣ್, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಶಾಸಕ ವಾಸು, ಎಂ.ಕೆ ಸೋಮಶೇಖರ್, ಆತ್ಮಜ್ಙಾನಾನಂದ ಸ್ವಾಮೀಜಿ, ಜಿತ ಕಾಮನಂದ ಸ್ವಾಮೀಜಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.