ತ್ರಿಪುರಾದಲ್ಲಿ ಬಿಜೆಪಿ ಬೆಂಬಲಿಗರ ಅಟ್ಟಹಾಸ: ಲೆನಿನ್ ಪ್ರತಿಮೆ ಧ್ವಂಸ, ಎಡಪಕ್ಷ ಕಚೇರಿಗಳ ಮೇಲೆ ದಾಳಿ

Crime, Kannada News, National, Top News No Comments on ತ್ರಿಪುರಾದಲ್ಲಿ ಬಿಜೆಪಿ ಬೆಂಬಲಿಗರ ಅಟ್ಟಹಾಸ: ಲೆನಿನ್ ಪ್ರತಿಮೆ ಧ್ವಂಸ, ಎಡಪಕ್ಷ ಕಚೇರಿಗಳ ಮೇಲೆ ದಾಳಿ 30

ತ್ರಿಪುರ: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ 48 ಗಂಟೆ ಗಳೊಳಗೆ ತ್ರಿಪುರದಲ್ಲಿ ಕಮ್ಯುನಿಸ್ಟ್‌ರ ಐಕಾನ್‌, ಕಾಂತ್ರಿಕಾರಿ ನಾಯಕ ಲೆನಿನ್‌‌ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಅಲ್ಲದೆ ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆದಿದೆ.

ಬೆಲೋನಿಯಾ ನಗರದ ಹೃದಯ ಭಾಗದಲ್ಲಿದ್ದ ಪ್ರತಿಮೆಯನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿ, ಬಿಜೆಪಿ ಕಾರ್ಯಕರ್ತರು ಧ್ವಂಸಮಾಡಿದ್ದಾರೆ. ಬಿಜೆಪಿ ವಿಜಯೋತ್ಸವ ಆಚರಣೆಯಲ್ಲಿದ್ದ ಕಾರ್ಯ ಕರ್ತರು ಪ್ರತಿಮೆ ಧ್ವಂಸಗೊಳಿಸಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐಎಂ ಗೆಲುವು ಸಾಧಿಸಿದ ಬಳಿಕ 11.5 ಅಡಿ ಎತ್ತರದ ಲೆನಿನ್‌‌ ಪ್ರತಿಮೆ ಸ್ಥಾಪಿಸಲಾಗಿತ್ತು.

ಎಡಪಂಥೀಯ ಆಳ್ವಿಕೆಯಿಂದ ತುಳಿತಕ್ಕೊಳಗಾದವರು ಅವರ ಐಕಾನ್ ಎನಿಸಿಕೊಂಡ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಸಮರ್ಥನೆ ನೀಡಿದೆ.

ಪ್ರತಿಮೆ ಕೆಡವಿದ ಬಳಿಕ ಅದರ ತಲೆ ಮತ್ತು ದೇಹವನ್ನು ಕಾರ್ಯಕರ್ತರು ಬೇರ್ಪಡಿಸಿದ್ದಾರೆ. ತಲೆ ಭಾಗವನ್ನು ಫುಟ್‌ಬಾಲ್‌ ರೀತಿ ಆಡಿದರೆಂದು ಸಿಪಿಐಎಂ ಮುಖಂಡ ದೂರಿದ್ದಾರೆ. ಅಲ್ಲದೆ ಎಡಪಕ್ಷಗಳ ಕಚೇರಿ ಮೇಲೆ ನಡೆದ ಆಕ್ರಮಣದಲ್ಲಿ 240ಕ್ಕಿಂತಲೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಮತ್ತು ಎಡಪಕ್ಷ ನಾಯಕರ ಮನೆ ಮೇಲೂ ದಾಳಿ ನಡೆದಿದೆ ಎಂದು ಸಿಪಿಎಂ ಕಾರ್ಯದರ್ಶಿ ಹರಿಪದ ದಾಸ್ ಆರೋಪಿಸಿದ್ದಾರೆ.

ಪಶ್ಚಿಮ ತ್ರಿಪುರಾದ ಸಿಧಾಯಿ ಜಿಲ್ಲೆಯಲ್ಲಿ ಸಿಪಿಐ (ಎಂ) ಕಚೇರಿಗೆ ಬೆಂಕಿ ಇಟ್ಟ ಪ್ರಕರಣ ಮತ್ತು ಉತ್ತರ ತ್ರಿಪುರಾದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಿಯಂತ್ರಣ) ಪ್ರದೀಪ್ ಡೇ ಅವರು ಹೇಳಿದ್ದಾರೆ.

 

Related Articles

Leave a comment

Back to Top

© 2015 - 2017. All Rights Reserved.