ಮಾ.9 ರಂದು ವರುಣಾ ಕ್ಷೇತ್ರದಲ್ಲಿ ವಿಕಾಸ ಪರ್ವ: ಯತೀಂದ್ರ ಸಿದ್ದರಾಮಯ್ಯಗೆ ಟಾಂಗ್ ನೀಡಲು ಜೆಡಿಎಸ್ ಸಜ್ಜು

BREAKING NEWS, Kannada News, Regional No Comments on ಮಾ.9 ರಂದು ವರುಣಾ ಕ್ಷೇತ್ರದಲ್ಲಿ ವಿಕಾಸ ಪರ್ವ: ಯತೀಂದ್ರ ಸಿದ್ದರಾಮಯ್ಯಗೆ ಟಾಂಗ್ ನೀಡಲು ಜೆಡಿಎಸ್ ಸಜ್ಜು 25

ಮೈಸೂರು: ಸಿಎಂ ತವರು ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಭರ್ಜರಿ ತಯಾರಿ ನಡೆಸಿದೆ. ಮಾ. 9 ರಂದು ವರುಣಾ ಕ್ಷೇತ್ರದಲ್ಲಿ ವಿಕಾಸ ಪರ್ವ ಯಾತ್ರೆ ನಡೆಯಲಿದೆ ಎಂದು ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಭಿಷೇಕ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಯನ್ನುದ್ದೇಶಿಸಿ ಮಾತನಾಡಿದ ಅವರು ಮಾ. 9 ರಂದು ವರುಣಾ ಕ್ಷೇತ್ರದ ಎಸ್. ಹೊಸಕೋಟೆಯಲ್ಲಿ ಜೆಡಿಎಸ್ ವಿಕಾಸ ಪರ್ವ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. ವರುಣಾ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ, 2018ರ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ತಿಳಿಸಿದರು.

ಒಟ್ಟಾರೆ ವರುಣಾ ಕ್ಷೇತ್ರದಲ್ಲಿ ಬೃಹತ್ ಸಮಾವೇಶದ ಮೂಲಕ ಇಲ್ಲಿನ ಸಂಭವನೀಯ ಅಭ್ಯರ್ಥಿ ಯತೀಂದ್ರ ಸಿದ್ದರಾಮಯ್ಯಗೆ ಟಾಂಗ್ ಕೊಡಲು ಜೆಡಿಎಸ್ ಸಜ್ಜಾಗಿದೆ.

Related Articles

Leave a comment

Back to Top

© 2015 - 2017. All Rights Reserved.