ಕನಸಿನ ಪಕ್ಷದಿಂದ ಹೊರಬಂದ ಬುದ್ದಿವಂತ

BREAKING NEWS, Entertainment, Kannada News, Regional, Top News No Comments on ಕನಸಿನ ಪಕ್ಷದಿಂದ ಹೊರಬಂದ ಬುದ್ದಿವಂತ 32

ಬೆಂಗಳೂರು: ಚುನಾವಣೆ ಎದುರಿಸುವ ಮುನ್ನವೇ ಕನಸಿನ ಪಕ್ಷದಿಂದ ನಟ ಉಪೇಂದ್ರ ಹೊರ ಬಂದಿದ್ದಾರೆ. ಹಲವು ಕನಸು, ಭರವಸೆಗಳೊಂದಿಗೆ ಕೆಪಿಜೆಪಿಗೆ ಸೇರಿ, ರಾಜಕೀಯಕ್ಕೆ ಧುಮುಕಿದ ಉಪ್ಪಿ, ಪಕ್ಷದಲ್ಲಿ ತರೆದೋರಿದ ಭಿನ್ನಭಿಪ್ರಾಯದಿಂದ ಪಕ್ಷ ತೊರೆಯಲು ನಿರ್ಧರಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಇಂದು ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ, ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ತಾವು ಹಾಗೂ ತಮ್ಮೊಡನೆ ಇನ್ನು ನಾಲ್ಕು ಮಂದಿ ಪಕ್ಷದಿಂದ ಹೊರ ಬರುತ್ತಿದ್ದು, ಪ್ರಜಾಕೀಯ ಪಕ್ಷ ಸ್ಥಾಪಿಸುವುದಾಗಿ ಹೇಳಿದರು.

ಈ ಚುನಾವಣೆಯಲ್ಲಿಯೇ ಸ್ಪರ್ಧಿಸಲು ಸಕಲ ರೀತಿಯಲ್ಲಿಯೂ ಯತ್ನಿಸಲಾಗುವುದು. ಆಗಲಿಲ್ಲವೆಂದರೆ, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷವನ್ನು ಕಟ್ಟುವುದಾಗಿ ಹೇಳಿದರು. ಹಾಗೆ ಇತರೆ ಪಕ್ಷಗಳಿಗೆ ಸೇರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅಲ್ಲದೆ ಸ್ವತಂತ್ರ ಅಭ್ಯರ್ಥಿಯಾಗಿಯೂ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲವೆಂಬುದನ್ನು ಉಪೇಂದ್ರ ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.