ಚುನಾವಣಾ ಕಣದಿಂದ‌ ದೂರ ಸರಿಯುವ ಮನ್ಸೂಚನೆ ನೀಡಿದ ಹೆಚ್.ಸಿ. ಮಹದೇವಪ್ಪ..!

BREAKING NEWS, Kannada News, Regional, Top News No Comments on ಚುನಾವಣಾ ಕಣದಿಂದ‌ ದೂರ ಸರಿಯುವ ಮನ್ಸೂಚನೆ ನೀಡಿದ ಹೆಚ್.ಸಿ. ಮಹದೇವಪ್ಪ..! 89

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಚುನಾವಣಾ ಕಣದಿಂದ‌ ದೂರ ಸರಿಯುವ ಮನ್ಸೂಚನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೋಮುವಾದಿ ಶಕ್ತಿಗಳಿಂದ ದೇಶದ ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಹೀಗಾಗಿ ಚುನಾವಣಾ ಪ್ರಚಾರಕ್ಕೆ ‌ಒತ್ತು‌ ನೀಡುತ್ತೇನೆ. ಕೆಲವೊಂದು ಬಾರಿ ಕಿಂಗ್ ಆಗುವುದಕ್ಕಿಂತ ಕಿಂಗ್ ಮೇಕರ್ ಆಗುವುದು ಉತ್ತಮ ಎಂದಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ರೀತಿಯ ಹೇಳಿಕೆ ಏಕೆ ನೀಡಿದರು ಎಂಬ ಪ್ರಶ್ನೆ ಮೂಡಿದೆ.

ಇದೇ ವೇಳೆ ರಾಜ್ಯ ಸರ್ಕಾರದ ಪ್ರತಿ ಕಾಮಗಾರಿಗಳಲ್ಲೂ ಕಮಿಷನ್ ಪಡೆಯಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಗಳು ಆಧಾರರಹಿತವಾಗಿವೆ. ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದರು.

ಇನ್ನು 245 ವೀಳ್ಯದೆಲೆ ಬೆಳೆಗಾರರಿಗೆ ತಲಾ ಐದು ಗುಂಟೆ ಜಾಗ ಹಂಚಿಕೆಗೆ ಕ್ಯಾಬಿನೆಟ್ ಒಪ್ಪಗೆ ನೀಡಿದ್ದು, ಮಾ.10 ರಂದು ಜಾಗ ಹಂಚಿಕೆ ಮಾಡಲಿದ್ದಾರೆ ಎಂದು ತಿಳಿಸಿದರು

Related Articles

Leave a comment

Back to Top

© 2015 - 2017. All Rights Reserved.