ಮೇಘಾಲಯದ ನೂತನ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಾಂಗ್ಮಾ ಅಧಿಕಾರ ಸ್ವೀಕಾರ

Kannada News, National No Comments on ಮೇಘಾಲಯದ ನೂತನ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಾಂಗ್ಮಾ ಅಧಿಕಾರ ಸ್ವೀಕಾರ 16

ಶಿಲ್ಲಾಂಗ್: ಬಿಜೆಪಿ ಬೆಂಬಲಿತ ನ್ಯಾಷನಲ್ ಪೀಪಲ್ಸ್ ಪಕ್ಷದ ಮುಖ್ಯಸ್ಥ ಕಾನ್ರಾಡ್ ಸಾಂಗ್ಮಾ ಅವರು ಮೇಘಾಲಯದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.

ಸಾಂಗ್ಮಾ ಅವರು ಮೇಘಾಲಯದ 12ನೇ ಮುಖ್ಯಮಂತ್ರಿ. ಅಲ್ಲದೇ ಇದೇ ಮೊದಲ ಬಾರಿಗೆ ಆ ರಾಜ್ಯದಲ್ಲಿ ಐದು ಪಕ್ಷಗಳ ಮೈತ್ರಿಕೂಟ ರಚನೆಯಾಗಿದೆ. ಕಮಲ ಅರಳಿರುವುದೂ ಕೂಡ ಇದೇ ಮೊದಲ ಬಾರಿಯಾಗಿದೆ.

40 ವರ್ಷದ ಕಾನ್ರಾಡ್ ಸಾಂಗ್ಮಾ ಅವರು ಮಾಜಿ ಕಾಂಗ್ರೆಸ್ ಮುಖಂಡ ದಿವಂಗತ ಪಿಎ ಸಾಂಗ್ಮಾ ಅವರ ಕಿರಿಯ ಪುತ್ರರಾಗಿದ್ದಾರೆ. ಎರಡು ದಶಕದ ಹಿಂದೆ ರಾಜಕೀಯ ಕ್ಷೇತ್ರಕ್ಕೆ ಅಡಿ ಇಟ್ಟ ಕಾನ್ರಾಡ್ ಸಾಂಗ್ಮಾ 2004ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.