ಬೌದ್ಧರು – ಮುಸ್ಲಿಮರ ನಡುವಿನ ಘರ್ಷಣೆ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

International, Kannada News No Comments on ಬೌದ್ಧರು – ಮುಸ್ಲಿಮರ ನಡುವಿನ ಘರ್ಷಣೆ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ 35

ಕೊಲಂಬೊ: ಬೌದ್ಧರು ಹಾಗೂ ಮುಸ್ಲಿಮರ ನಡುವಿನ ಘರ್ಷಣೆಯಿಂದಾಗಿ ಶ್ರೀಲಂಕಾದಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಹಿಂದೂ ಮಹಾಸಾಗರ ದ್ವೀಪದ ಕೇಂದ್ರೀಯ ಜಿಲ್ಲೆ ಕ್ಯಾಂಡಿಯಲ್ಲಿ ನಿನ್ನೆ ಎರಡೂ ಸಮುದಾಯಗಳ ನಡುವೆ ಗಲಭೆ ವಿಪರೀತಕ್ಕೆ ಹೋದ ಕಾರಣ ತುರ್ತು ಪರಿಸ್ಥಿತಿ ಹೇರಲಾಗಿದೆ. ಕಳೆದ ಒಂದು ವರ್ಷದಿಂದ 2 ಸಮುದಾಯಗಳ ನಡುವೆ ಆಗಾಗ ಘರ್ಷಣೆ ಸಂಭವಿಸುತ್ತಿತ್ತು ನಿನ್ನೆ ತಾರಕಕ್ಕೆ ಹೋಗಿದೆ.

ಮುಸ್ಲಿಂ ಸಮುದಾಯದವರು ಬಲವಂತವಾಗಿ ತಮ್ಮ ಸಮುದಾಯದವರನ್ನು ಮತಾಂತರ ಮಾಡುತ್ತಿದ್ದು ಬೌದ್ಧ ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ನಾಶ ಮಾಡಿದ್ದಾರೆ ಎಂದು ಕೆಲ ಬೌದ್ಧ ಸಮುದಾಯದ ಗುಂಪುಗಳು ಆರೋಪಿಸಿದ್ದು ಘರ್ಷಣೆ ಹೆಚ್ಚಾಗಲು ಕಾರಣವಾಗಿದೆ.

ವಿಶೇಷ ಸಂಪುಟ ಸಭೆಯ ನಂತರ ರಾಷ್ಟ್ರದ ವಿವಿಧೆಡೆ ಗಲಭೆ ಹರಡುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರದಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ’ಎಂದು ಸರ್ಕಾದ ವಕ್ತಾರರಾದ ದಯಾಸಿರಿ ಜಯಶೇಖರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.