ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ

Kannada News, Regional No Comments on ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ 10

ಮೈಸೂರು: ಬೆಳಗೋಳ-ಸಾಗರಕಟ್ಟೆ ರೈಲು ನಿಲ್ದಾಣದ ಮಧ್ಯೆ ರೈಲ್ವೆ ಕಿ.ಮೀ. ನಂ.14/100-200ರಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಮೈಸೂರು ರೈಲ್ವೆ ಪೊಲೀಸರಿಗೆ ದೊರಕಿದ್ದು, ಮೃತ ದೇಹವನ್ನು ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿರುತ್ತದೆ.

ಅಪರಿಚಿತ ವ್ಯಕ್ತಿಯ ಚಹೆರೆ ಇಂತಿದೆ: ಎತ್ತರ 5.2 ಅಡಿ, ಕೋಲು ಮುಖ, ಸಾದಾರಣ ಕಪ್ಪು ಮೈಬಣ್ಣ, ಸಾದಾರಣ ಶರೀರ, ಉದ್ದನೆಯ ಮೂಗು, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು, ಮುಖದಲ್ಲಿ ಕಪ್ಪು-ಬಿಳಿ ಮಿಶ್ರಿತ ಕುರುಚಲು ಗಡ್ಡ-ಮೀಸೆ ಬಿಟ್ಟಿರುತ್ತಾರೆ.

ಒಂದು ತಿಳಿ ಗುಲಾಬಿ ಬಣ್ಣದ ತೋಳಿನ ಶರ್ಟ್, ನೀಲಿ ಬಣ್ಣದ ಬನಿಯನ್, ಬಳಿಯ ಪಂಚೆ, ಬ್ರೌನ್ ಬಣ್ಣದ ಅಂಡರ್‍ವೇರ್‍ನಲ್ಲಿ ಎನ್‍ಕೆಸಿ ಜೂಮ್ ಎಂದು ಇರುತ್ತದೆ.

ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸುವುದು.

Related Articles

Leave a comment

Back to Top

© 2015 - 2017. All Rights Reserved.