ಕರ್ನಾಟಕದಲ್ಲಿ ಅಮಾಯಕರ ಹತ್ಯೆಯೇ ಸರ್ಕಾರದ ಅಜೆಂಡಾ: ಯೋಗಿ ಆದಿತ್ಯನಾಥ್‌

Kannada News, Regional No Comments on ಕರ್ನಾಟಕದಲ್ಲಿ ಅಮಾಯಕರ ಹತ್ಯೆಯೇ ಸರ್ಕಾರದ ಅಜೆಂಡಾ: ಯೋಗಿ ಆದಿತ್ಯನಾಥ್‌ 13

ಮಂಗಳೂರು: ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಅಲೆ ಎದ್ದಿದೆ. ಈಶಾನ್ಯದ ಮೂರು ರಾಜ್ಯಗಳಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್‌ ಝೀರೋ ಆಗಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು.

ಮಂಗಳೂರಿನಲ್ಲಿ ನಡೆದ ಬಿಜೆಪಿ ಜನಸುರಕ್ಷಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿಯೂ ಕಾಂಗ್ರೆಸ್‌ ಮುಕ್ತ ಆಗಬೇಕು. ಮೋದಿ ಸರ್ಕಾರ ಬಂದ ಬಳಿಕ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯ ಅಭಿವೃದ್ಧಿ ಅಜೆಂಡಾಗೆ ಜನ ಬೆಂಬಲ ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿ ಅಮಾಯಕರ ಹತ್ಯೆಯೇ ಸರ್ಕಾರದ ಅಜೆಂಡಾ ಆಗಿದೆ ಎಂದರು.

ಕಾಂಗ್ರೆಸ್‌ ಪಾಲಿಗೆ ಕರ್ನಾಟಕ ಎಟಿಎಂ ಇದ್ದಂತೆ. ಪ್ರತಿ ಯೋಜನೆಯಿಂದ ಜನರ ದುಡ್ಡನ್ನು ಲೂಟಿ ಮಾಡುತ್ತಿದ್ದಾರೆ. ಇಲ್ಲಿ ರೈತರ ಆತ್ಮಹತ್ಯೆ ಆಗುತ್ತಿದೆ. ರೈತರ ಆತ್ಮಹತ್ಯೆ ಸರ್ಕಾರಕ್ಕೆ ಗಂಭೀರ ಎನ್ನಿಸುತ್ತಿಲ್ಲವೇ..? ಉತ್ತರ ಪ್ರದೇಶದಲ್ಲಿ 86 ಲಕ್ಷ ರೈತರ ಸಾಲಮನ್ನಾ ಮಾಡಿದ್ದೇನೆ ಎಂದು ಹೇಳಿದರು.

Related Articles

Leave a comment

Back to Top

© 2015 - 2017. All Rights Reserved.