ಅಚ್ಛೇ ದಿನ್ ಎಲ್ಲಿ ಮಾನ್ಯ ಪ್ರಧಾನಿಗಳೆ..? EPF ನಿವೃತ್ತ ನೌಕರರ ಪ್ರತಿಭಟನೆ

Kannada News, Regional No Comments on ಅಚ್ಛೇ ದಿನ್ ಎಲ್ಲಿ ಮಾನ್ಯ ಪ್ರಧಾನಿಗಳೆ..? EPF ನಿವೃತ್ತ ನೌಕರರ ಪ್ರತಿಭಟನೆ 12

ಮೈಸೂರು: ತುಟಿ ಭತ್ಯೆ ಜೊತೆಗೆ ಕನಿಷ್ಠ ಪಿಂಚಣಿ 7500 ರೂ. ಹಾಗೂ ಇತರೆ ಬೇಡಿಕೆಗಳ ಈಡೇರಿಸುವಂತೆ ಕರ್ನಾಟಕ ರಾಜ್ಯ ಇ.ಪಿ.ಎಫ್ ನಿವೃತ್ತ ಒಕ್ಕೂಟ ಪ್ರತಿಭಟನೆ ನಡೆಸಿತು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಮಾತನಾಡಿ ಮಾನ್ಯ ಮೋದಿಜೀ, ನಾನು ಒಬ್ಬ ಜನಸಾಮಾನ್ಯ ಎಂದು ಅಬ್ಬರದ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದು 4 ವರ್ಷ ಕಳೆಯುತ್ತ ಬಂದಿದ್ದರು ಬಡವರಿಗೆ ರೈತರಿಗೆ, ನಿವೃತ್ತ ಕಾರ್ಮಿಕರಿಗೆ ಪ್ರಧಾನಿಯವರ ಘೊಷಣೆ “ಅಚ್ಛೇ ದಿನ್”..! ಇದುವರೆಗೂ ಬಂದಿಲ್ಲ. 2017ರ ಚಳಿಗಾಲದ ಅಧಿವೇಶನದಲ್ಲಿ ಕಾರ್ಮಿಕ ಕನಿಷ್ಠ ಪಿಂಚಣಿಯ ತುಟಿಭತ್ಯೆಯೊಂದಿಗೆ 3500 ರೂ ಗಳ ತಾತ್ಕಾಲಿಕ ಪಿಂಚಣಿ ನೀಡುವ ಆಶಾಭಾವನೆ ಇತ್ತು. ಆದರೆ ಅದರ ಬದಲು ಸಂಸದರ ವೇತನ ಹೆಚ್ಚಿಸಿರುವುದು ಈ ದೇಶದ ಬಡವರ ಮತ್ತು ಕಾರ್ಮಿಕರ ದುರಾದೃಷ್ಟವೇ ಸರಿ.

ಈ ದೇಶದಲ್ಲಿ 60 ಲಕ್ಷ ನಿವೃತ್ತ ಕಾರ್ಮಿಕರಿದ್ದು EPFಗೆ ಒಳಪಡುವ 8 ಕೋಟಿ EPF ಸದಸ್ಯರಿದ್ದಾರೆ ಎಂಬುದನ್ನು ಸರ್ಕಾರ ಮರೆತಿದೆ. ಇನ್ನಾದರು ನಮಗೆ ಕನಿಷ್ಠ ಜೀವನ ನಡೆಸಲು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ 32ಕೋಟಿಗೂ ಹೆಚ್ಚಿರುವ ಕಾರ್ಮಿಕರು ಪಾಠ ಕಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Related Articles

Leave a comment

Back to Top

© 2015 - 2017. All Rights Reserved.