ರಂಗಪ್ಪ ಮೇಲಿನ ಆರೋಪ ನೂರಕ್ಕೆ ನೂರು ಸತ್ಯ: ನನಗೆ ‘ಬಿ ಫಾರ್ಮ್’ ನೀಡಿದರೆ ಯಾವ ಪಕ್ಷಕ್ಕೂ ಹೋಗಲು ಸಿದ್ದ: ಹರೀಶ್ ಗೌಡ

BREAKING NEWS, Kannada News, Regional, Top News No Comments on ರಂಗಪ್ಪ ಮೇಲಿನ ಆರೋಪ ನೂರಕ್ಕೆ ನೂರು ಸತ್ಯ: ನನಗೆ ‘ಬಿ ಫಾರ್ಮ್’ ನೀಡಿದರೆ ಯಾವ ಪಕ್ಷಕ್ಕೂ ಹೋಗಲು ಸಿದ್ದ: ಹರೀಶ್ ಗೌಡ 155

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಿದಂತೆ ಚುನಾವಣೆ ಕಾವು ಜೋರಾಗಿದೆ. ಅದರಲ್ಲೂ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು ಅಭ್ಯರ್ಥಿಗಳಿಂದ ಭಾರಿ ಪೈಪೋಟಿ ಸಹ ನಡೆಯುತ್ತಿದೆ. ರಾಜಕೀಯ ಪಕ್ಷಗಳಿಗೆ ಬಂಡಾಯದ ಬಿಸಿ ಬಗೆಹರಿಸುವುದೆ ತಲೆನೋವಾಗಿ ಪರಿಣಮಿಸಿದೆ.

ಆದರೆ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿರುವ ಪರಿಸ್ಥಿತಿಯೇ ಬೇರೆ. ಈಗಾಗಲೇ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರೊ. ಕೆ.ಎಸ್ ರಂಗಪ್ಪ ಪ್ರಚಾರವನ್ನು ಸಹ ಆರಂಭಿಸಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ಹರೀಶ್ ಗೌಡ ಪ್ರಬಲವಾಗಿ ಬೆಳೆದಿದ್ದರು. ಆದರೆ ರಂಗಪ್ಪ ಅವರ ಆಗಮನದಿಂದ ಸಾಕಷ್ಟು ಹೈಡ್ರಾಮ ನಡೆದು ಅಂತಿಮವಾಗಿ ಹರೀಶ್ ಗೌಡ ಪಕ್ಷದಿಂದ ಹೊರಬಂದು ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಎಸ್ ವಿರುದ್ಧವೇ ತೊಡೆ ತಟ್ಟಿದ್ದಾರೆ.

ಆದರೆ ಈಗ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಇಲ್ಲ. ಬದಲಾಗಿ ರಂಗಪ್ಪ ಅವರಿಗೆ ಟಿಕೆಟ್ ನೀಡಬಾರದೆಂಬ ಕೂಗು ಕೇಳಿಬರುತ್ತಿದೆ.

ಹೌದು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯರು, ಮೈಸೂರು ವಿವಿ ಉಳಿಸಿ ಹೋರಾಟ ಸಮಿತಿ ವಿಶ್ರಾಂತ ಕುಲಪತಿ ರಂಗಪ್ಪ ಅವರು ಭ್ರಷ್ಟಾಚಾರ ಮಾಡಿದ್ದಾರೆ. KSOU ಮಾನ್ಯತೆ ರದ್ದಾಗಲು ಅವರೇ ಕಾರಣ. ಹೀಗಾಗಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಬಾರದು. ಪಕ್ಷಕ್ಕೆ ಅವರು ಹಿನ್ನಡೆ ಎಂದು ಹೇಳಿದ್ದರು.

ಅಲ್ಲದೆ ವಿವಿಯಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರು ಸಹ ಹೇಳಿಕೆ ನೀಡಿದ್ದರು. ಆದರೆ ರಂಗಪ್ಪ ಅವರ ಹೆಸರು ಹೇಳದೆ ಆರೋಪ ಮಾಡಿದ್ದರು. ಇದಕ್ಕೆ ರಂಗಪ್ಪ ಅವರು ಪ್ರತಿಕ್ರಿಯೆ ನೀಡಿ ಬಹಿರಂಗ ಚರ್ಚೆಗೆ ಮೊಯ್ಲಿಯವರನ್ನು ಆಹ್ವಾನಿಸಿದ್ದರು.

ಈ ಬಗ್ಗೆ ಚಾಮರಾಜ ವಿಧಾನಸಭ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹರೀಶ್ ಗೌಡ ಅವರನ್ನು ನ್ಯೂಸ್ ನಿರಂತರ ಸಂಪರ್ಕಿಸಿದಾಗ, ರಂಗಪ್ಪ ಅವರ ಮೇಲಿನ ಆರೋಪ ನೂರಕ್ಕೆ ನೂರು ಸತ್ಯ ಅದನ್ನು ಇಡೀ ಜಗತ್ತೇ ಮಾತನಾಡುತ್ತಿದೆ ಎಂದು ಹರೀಶ್ ಗೌಡ ಹೇಳಿದ್ದಾರೆ.

ಒಂದು ವೇಳೆ ರಂಗಪ್ಪ ಅವರ ಮೇಲಿನ ಆರೋಪ ಸಾಬೀತಾಗಿ, ಅಥವಾ ಆರೋಪದ ಕಾರಣ ಟಿಕೆಟ್ ನೀಡದಿದ್ದರೆ ಜೆಡಿಎಸ್ ಗೆ ಮರಳುವಿರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಜನರ ಸೇವೆಗೆ ಸದಾ ಸಿದ್ದ ಹೀಗಾಗಿ ಪಕ್ಷೇತರನಾಗಿ ಚುನಾವಣಾ ಕಣಕ್ಕೆ ಧುಮುಕಿದ್ದೇನೆ. ಅಂತಹ ಸನ್ನಿವೇಶ ಬಂದರೆ ಎಲ್ಲಾ ಮೂಲಗಳಿಂದ ವಿಚಾರಿಸಿ ಮರಳಲು ಸಿದ್ದ. ಹಾಗೂ ನನಗೆ ಯಾವುದೇ ಪಕ್ಷ ಬಿ ಫಾರಂ ನೀಡಿದರೆ ವಿಚಾರಿಸಿ ನಂತರ ತೀರ್ಮಾನ ತೆಗೆದುಕೊಳ್ಳುವೆ ಎಂದು ತಿಳಿಸಿದರು.

ಒಟ್ಟಾರೆ ಆರೋಪ ಪ್ರತ್ಯಾರೋಪಗಳ ನಡುವೆ ಚಾಮರಾಜ ಕ್ಷೇತ್ರದಲ್ಲಿ ಚುನಾವಣಾ, ಕಾವು ಹೆಚ್ಚಾಗಿದ್ದು ರಂಗಪ್ಪಗೆ ಟಿಕೆಟ್ ಕೈ ತಪ್ಪುತ್ತ, ಹರೀಶ್ ಗೌಡ ಮಾತೃ ಪಕ್ಷಕ್ಕೆ ಮರಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Related Articles

Leave a comment

Back to Top

© 2015 - 2017. All Rights Reserved.