ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಅವಘಡ: ಒಂದುವರೆ ಎಕರೆ ಕಬ್ಬು ಬೆಂಕಿಗಾಹುತಿ

Crime, Kannada News, Regional No Comments on ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಅವಘಡ: ಒಂದುವರೆ ಎಕರೆ ಕಬ್ಬು ಬೆಂಕಿಗಾಹುತಿ 20

ಸಿಂದಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಅವಘಡ ಸಂಭವಿಸಿದ್ದು ಒಂದುವರೆ ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು ಬೆಂಕಿಗಾಹುತಿಯಾಗಿದೆ.

ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಗಣಿಹಾರ ಗ್ರಾಮದ ನಿವಾಸಿ ಸಲಬಣ್ಣ ಶಿವಣಗಿ ಎಂಬುವರಿಗೆ ಸೇರಿದ ಜಮೀನು. ಕೈಗಡ ಸಾಲ ಮಾಡಿ ಬೆಳೆದಿದ್ದ ಸುಮಾರು ಎರಡು ಲಕ್ಷದ ಮೌಲ್ಯದ ಕಬ್ಬಿನ ಬೆಳೆಗೆ ಹಾನಿಯಾಗಿದೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದೆ ಹಾಗೂ ಗ್ರಾಮಸ್ಥರೂ ಸಹ ಸಹಕರಿಸಿ ಹರಸಾಹಸವ ಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.