ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಬೆನ್ನಲ್ಲೆ: ಎನ್’ಡಿಎ ಮೈತ್ರಿಕೂಟದಿಂದ ಟಿಡಿಪಿ ಗುಡ್ ಬೈ

Kannada News, National, Top News No Comments on ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಬೆನ್ನಲ್ಲೆ: ಎನ್’ಡಿಎ ಮೈತ್ರಿಕೂಟದಿಂದ ಟಿಡಿಪಿ ಗುಡ್ ಬೈ 20

ಹೈದರಾಬಾದ್: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿಕೆ ನಿಡಿದ ಬೆನ್ನಲ್ಲೆ ಎನ್’ಡಿಎ ನೇತೃತ್ವದ ಬಿಜೆಪಿ ಮೈತ್ರಿಕೂಟದಿಂದ ಹೊರಬರಲು ಟಿಡಿಪಿ ನಿರ್ಧರಿಸಿದೆ. ಅಮರಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಹಿತದೃಷ್ಟಿಯೇ ಮುಖ್ಯ” ಎಂದಿದ್ದಾರೆ.

ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದಿಲ್ಲ. ಬದಲಾಗಿ ಅಷ್ಟೇ ಅನುದಾನ ಒಳಗೊಂಡಿರುವ ವಿಶೇಷ ಪ್ಯಾಕೇಜ್ ಘೋಷಿಸುತ್ತೇವೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆದ ತೆಲುಗು ದೇಶಂ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯ ವಿಂಗಡಣೆ ವೇಳೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾ ನೀಡುವುದಾಗಿ ನೀಡಿದ್ದ ಭರವಸೆಯನ್ನ ಪೂರೈಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಚಂದ್ರಬಾಬುನಾಯ್ಡು ಅಸಮಾಧಾನ ಹೊರಹಾಕಿದ್ದ , ಬಿಜೆಪಿ ಸಂಗ ತೊರೆಯುವ ಬಗ್ಗೆ ಬೆಳಗ್ಗೆಯೇ ಸೂಚನೆ ನೀಡಿದ್ದರು. ಅರುಣ್ ಜೇಟ್ಲಿ ಹೇಳಿಕೆ ಬಳಿಕ ಟಿಡಿಪಿಯಲ್ಲಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

`ಕಳೆದ 4 ವರ್ಷಗಳಿಂದ ನಾನು ಕೇಂದ್ರ ಸರ್ಕಾರದ ಮುಂದೆ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ನಮ್ಮ ಮೈತ್ರಿ ಪಕ್ಷವಾಗಿ ಬಿಜೆಪಿ ನಮಗೆ ನೀಡಿದ್ದ ಭರವಸೆ ಪೂರೈಸುವ ನಂಬಿಕೆ ಇಟ್ಟುಕೊಂಡಿದ್ದೆವು. ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯಲ್ಲಿ ಕೇಂದ್ರದ ಜೊತೆ ಪರಸ್ಪರ ಸಹಕಾರ ನೀಡುತ್ತಾ ಬಂದಿದ್ದೆವು. ಆದರೆ, ಈಗ ನನ್ನ ರಾಜ್ಯದ ಜನರಿಗೆ ಅಪಮಾನವಾಗಿದೆ. ಈಗಲೂ ನಾನು ಧ್ವನಿ ಎತ್ತದಿದ್ದರೆ ಅವರು ನನ್ನನ್ನು ಕ್ಷಮಿಸುವುದಿಲ್ಲ′ ಎಂದು ಚಂದ್ರಬಾಬುನಾಯ್ಡು ಹೇಳಿದ್ದಾರೆ.

ಇನ್ನು ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್. ಚೌಧರಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related Articles

Leave a comment

Back to Top

© 2015 - 2017. All Rights Reserved.