ಸಂದರ್ಭ ಬಂದ್ರೆ ಹೆಣ್ಣು ಕತ್ತಿ ಹಿಡಿಯೋಕು ಸೈ: ಮಾಳವಿಕ ಅವಿನಾಶ್

Kannada News, Regional No Comments on ಸಂದರ್ಭ ಬಂದ್ರೆ ಹೆಣ್ಣು ಕತ್ತಿ ಹಿಡಿಯೋಕು ಸೈ: ಮಾಳವಿಕ ಅವಿನಾಶ್ 73

ಮೈಸೂರು: ರಾಣಿ ಅಬ್ಬಕ್ಕ, ಝಾನ್ಸಿರಾಣಿ ಲಕ್ಷ್ಮಿಬಾಯಿ ಸಂದರ್ಭ ಬಂದಿದ್ದಕ್ಕೇ ಕತ್ತಿ ಹಿಡಿದಿದ್ದು. ಸಂದರ್ಭ ಬಂದರೆ ಹೆಣ್ಣು ತನ್ನ ರಕ್ಷಣೆಗಾಗಿ ಕತ್ತಿಯನ್ನು ಹಿಡಿಯುತ್ತಾಳೆ ಇದಕ್ಕೆ ಅವಕಾಶ ನೀಡಬೇಡಿ ಎಂದು ವಕೀಲರು ಹಾಗೂ ಕನ್ನಡ ಚಲನಚಿತ್ರ ನಟಿಯಾದ ಮಾಳವಿಕ ಅವಿನಾಶ್ ಎಚ್ಚರಿಕೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ರಾಣಿಬಹದ್ದೂರು ಸಭಾಂಗಣದಲ್ಲಿ , ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಯು.ಜಿ.ಸಿ-ಯು.ಪಿ.ಇ ಮೈಸೂರು ವಿವಿ ಸಹಯೋಗದಲ್ಲಿ ಮೈಸೂರು ವಿವಿ ಮಹಿಳಾ ಅಧ್ಯಾಪಕರ ವೇದಿಕೆ ವತಿಯಿಂದ ‘ಮೈತ್ರಿ’ಯ ಪ್ರಾರಂಭೋತ್ಸವ ಮತ್ತು ‘ಮಹಿಳೆಯರ ಸಮಕಾಲಿನ ಅಗತ್ಯಗಳು’ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಾಳವಿಕ ಅವರು ಮಾತನಾಡಿ ಸಮಾಜದಲ್ಲಿ 50% ಮಹಿಳೆಯರು ಇದ್ದೀವಿ ಆದರೆ ಪಾರ್ಲಿಮೆಂಟ್ ನಲ್ಲಿ ಯಾಕೆ 50% ಮಹಿಳೆಯರು ಇಲ್ಲ, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಿಗೆ ಹೆಣ್ಣೆ ಕಾರಣ ಎಂಬ ಹೇಳಿಕೆಯನ್ನ ನೀಡುತ್ತಾರೆ ಇಂತಹ ಕ್ರೂರ ಮನಸ್ಸು ಇರಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಮೈಸೂರು ವಿವಿ ಪ್ರಭಾರ ಕುಲಪತಿಗಳಾದ ಡಾ.ಸಿ.ಬಸವರಾಜು ಅವರು ಮಾತನಾಡಿ ಭಾರತ ಸಂವಿಧಾನದಡಿ ಎಲ್ಲರೂ ಸಮಾನರು. 70% ಮಹಿಳೆಯರಿಗೆ ರಕ್ಷಣೆ ಇಲ್ಲ, ಬಾಲ್ಯ ವಿವಾಹ, ಸತಿಪದ್ದತಿಯಂತಹ ಸಾಮಾಜಿಕ ಪಿಡುಗುಗಳ ವಿರುದ್ದ ಧ್ವನಿ ಎತ್ತಬೇಕು. ಆರೋಗ್ಯಕರ ಸಮಾಜವನ್ನು ಸೃಷ್ಟಿಸಬೇಕು ಎಂದು ಹೇಳಿದರು.

ಮೈಸೂರು ವಿವಿ ಕುಲಸಚಿವರಾದ ಭಾರತಿ.ಡಿ ಮೈತ್ರಿ ವೇದಿಕೆಯ ಕುರಿತು ಮಾತನಾಡಿ ಮಹಿಳೆಯರ ಮೇಲಿನ 100 ದೌರ್ಜನ್ಯ ಪ್ರಕರಣಗಳಲ್ಲಿ 1% ಮಾತ್ರ ಶಿಕ್ಷೆಯಾಗುತ್ತಿದ್ದೆ. ಮೈತ್ರಿಯಂತಹಾ ವೇದಿಕೆಗಳು ಮಹಿಳೆಯರಿಗೆ ನ್ಯಾಯ ದೊರಕಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ರಕ್ಷಣಾ ಗರ್ಲ್ಸ್ ಬೆಟಾಲಿಯನ್ ಆಡಳಿತಾಧಿಕಾರಿಗಳಾದ ಕ್ಯಾಪ್ಟನ್ ಪ್ರತಿಭಾ ತಿವಾರಿ, ಮೈಸೂರಿನ ನೆಕ್ಟರ್ ಫ್ರೆಶ್ ಸಂಸ್ಥಾಪಕರಾದ ಛಾಯನಂಜಪ್ಪ, ಪತ್ರಿಕೋದ್ಯಮ ವಿಭಾಗದ ಪ್ರೊ. ಉಷಾರಾಣಿ.ಎನ್ ಮತ್ತು ಸಂಘಟನಾ ಕಾರ್ಯದರ್ಶಿಗಳಾದ ಡಾ.ಸಪ್ನ.ಎಂ.ಎಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಚೈತ್ರ ಗೌಡ ಹಾಸನ

Related Articles

Leave a comment

Back to Top

© 2015 - 2017. All Rights Reserved.