ತನ್ನ ಆಸ್ತಿಯನ್ನೆಲ್ಲ ನಟ ಸಂಜಯ್ ದತ್ ಹೆಸರಿಗೆ ಬರೆದಿಟ್ಟು ಸಾವನ್ನಪ್ಪಿದ ಅಭಿಮಾನಿ

Entertainment, Kannada News No Comments on ತನ್ನ ಆಸ್ತಿಯನ್ನೆಲ್ಲ ನಟ ಸಂಜಯ್ ದತ್ ಹೆಸರಿಗೆ ಬರೆದಿಟ್ಟು ಸಾವನ್ನಪ್ಪಿದ ಅಭಿಮಾನಿ 10

ಮುಂಬೈ: ತನ್ನ ನೆಚ್ಚಿನ ನಟನಿಗಾಗಿ ಅಥವಾ ನಟಿಗಾಗಿ ಅಭಿಮಾನಿಗಳು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದರಂತೆ ಇಲ್ಲೊಬ್ಬರು ಮಹಿಳೆ ತನ್ನ ಆಸ್ತಿಯನ್ನೆಲ್ಲ ಬಾಲಿವುಡ್ ನಟ ಸಂಜಯ್ ದತ್ ಹೆಸರಿಗೆ ಬರೆದಿಟ್ಟು ಸಾವನ್ನಪ್ಪಿದ್ದಾರೆ. ಮುಂಬೈ ಮೂಲದ 62 ವರ್ಷದ ನಿಧಿ ತ್ರಿಪಾಠಿ ಎಂಬುವರು ಸಾಯುವ ಮುನ್ನ ನಾಮಿನಿಯಾಗಿ ಸಂಜಯ್ ದತ್ ಹೆಸರು ಬರೆದಿದ್ದಾರೆ.

ಜನವರಿ 15ರಂದು ಅನಾರೋಗ್ಯದಿಂದ ನಿಧಿ ನಿಧನರಾಗಿದ್ದಾರೆ. ಬಳಿಕ ಪೊಲೀಸರು ಸಂಜಯ್ ದತ್ ಅವರಿಗೆ ಕರೆ ಮಾಡಿ ನಿಧಿ ನಿಮ್ಮ ಹೆಸರಲ್ಲಿ ಹಣ ಡೆಪಾಸಿಟ್ ಮಾಡಿರುವ ವಿಷಯ ತಿಳಿಸುತ್ತಾರೆ. ವಿಷಯ ತಿಳಿದು ಗಾಬರಿಯಾದ ಸಂಜಯ್ ದತ್, ನಂತರ ಬ್ಯಾಂಕ್ ಆಫ್ ಬರೋಡಾಗೆ ಪತ್ರ ಬರೆದು ನಿಧಿ ಕುಟುಂಬಕ್ಕೆ ಬ್ಯಾಂಕ್ ಲಾಕರ್ ಹಾಗೂ ಆಸ್ತಿಯನ್ನು ನೀಡುವಂತೆ ತಿಳಿಸಿದ್ದಾರೆ.

ನಿಧಿ ಕುಟುಂಬದವರಿಗೂ ಈ ಆಸ್ತಿಯ ಕುರಿತು ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ನಿಧಿ ಅವರ ಯಾವ ಆಸ್ತಿಯೂ ನನಗೆ ಬೇಡ ಎಂದು ಸಂಜಯ್ ದತ್ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.