ತ್ರಿಕೋನ ಸರಣಿ: ಭಾರತಕ್ಕೆ ಸುಲಭ ತುತ್ತಾದ ಬಾಂಗ್ಲಾ

Kannada News, Sports No Comments on ತ್ರಿಕೋನ ಸರಣಿ: ಭಾರತಕ್ಕೆ ಸುಲಭ ತುತ್ತಾದ ಬಾಂಗ್ಲಾ 10

ಕೊಲಂಬೊ: ನಿಡಹಾಸ್ ಟ್ರೋಫಿಯ ತ್ರಿಕೋನ ಸರಣಿಯ 2ನೇ ಟಿ-20 ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಸುಲಭ ಜಯ ಸಾಧಿಸಿತು. ಬಾಂಗ್ಲಾ ನೀಡಿದ 139 ರನ್’ಗಳ ಗುರಿಯನ್ನು ಭಾರತ ತಂಡ 18.4 ಓವರ್’ಗಳಲ್ಲಿ 141/4 ರನ್ ಚೇಸ್ ಮಾಡಿ ಗೆಲುವಿನ ನಗೆ ಬೀರಿತು.

ಮೊದಲ ಪಂದ್ಯದಂತೆ ಶಿಖರ್ ಧವನ್ ಈ ಪಂದ್ಯದಲ್ಲೂ ಅರ್ಧ ಶತಕ(55: 43 ಎಸೆತ, 5 ಬೌಂಡರಿ, 2 ಸಿಕ್ಸ್’ರ್) ಬಾರಿಸಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ರೈನಾ 28(27 ಎಸೆತ, 1 ಸಿಕ್ಸ್’ರ್, 1 ಬೌಂಡರಿ) ರನ್ ಪೇರಿಸಿದರೆ ಕನ್ನಡಿಗ ಪಾಂಡೆ ಅಜೇಯರಾಗಿ 19 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 27 ರನ್ ಸಿಡಿಸಿ ಜಯದ ರುವಾರಿ ಎನಿಸಿದರು.

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ: 20 ಓವರ್’ಗಳಲ್ಲಿ 139/8

(ಲಿಂಟನ್ ದಾಸ್ 34, ಶಬ್ಬೀರ್ ರೆಹಮಾನ್ 30, ಉನಾದಕ್ಟ್ 38/3, ವಿಜಯ್ ಶಂಕರ್ 32/2)

ಭಾರತ: 18.4 ಓವರ್’ಗಳಲ್ಲಿ 140/4

(ಶಿಖರ್ ಧವನ್ 55, ರೈನಾ 28, ಪಾಂಡೆ 27)

ಪಂದ್ಯ ಶ್ರೇಷ್ಠ: ವಿಜಯ್ ಶಂಕರ್

Related Articles

Leave a comment

Back to Top

© 2015 - 2017. All Rights Reserved.