ಇಂದಿನಿಂದ 2 ದಿನಗಳ ಸಿಎಂ ಮೈಸೂರು ಪ್ರವಾಸ

News No Comments on ಇಂದಿನಿಂದ 2 ದಿನಗಳ ಸಿಎಂ ಮೈಸೂರು ಪ್ರವಾಸ 32

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 9 ಹಾಗೂ 10 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

 • ಮಾರ್ಚ್ 9 ರಂದು ಬೆಳಿಗ್ಗೆ 11-30ಕ್ಕೆ ಹೆಲಿಕ್ಟಾಪರ್ ಮೂಲಕ ಪಿರಿಯಾಪಟ್ಟಣ ಸರ್ಕಾರಿ ಜೂನಿಯರ್ ಕಾಲೇಜು ಆವರಣದ ಹೆಲಿಪ್ಯಾಡ್‍ಗೆ ಆಗಮಿಸಲಿದ್ದಾರೆ. ನಂತರ ಪಿರಿಯಾಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
 • ಮಧ್ಯಾಹ್ನ 3 ಗಂಟೆಗೆ ಹುಣಸೂರು ಟೌನ್‍ನಲ್ಲಿ ಆಯೋಜಿಸಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
 • ರಾತ್ರಿ 7 ಗಂಟೆಗೆ ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಶಕ್ತಿಧಾಮದ ಆವರಣದಲ್ಲಿ ಶಕ್ತಿಧಾಮದ ವಸತಿ ನಿಲಯ ಮತ್ತು ಕೌಶಲ್ಯಾಭಿವೃದ್ಧಿ ಕಟ್ಟಡದ ಉದ್ಘಾಟನೆ ನೆರವೇರಿಸುವರು. ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
 • ಮಾರ್ಚ್ 10 ರಂದು ಬೆಳಿಗ್ಗೆ 10-30ಕ್ಕೆ ಮೈಸೂರಿನ ಲಲಿತ್ರಾದಿನಗರ ಉತ್ತರ ಬಡಾವಣೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ, ಮೈಸೂರು ಇದರ ವತಿಯಿಂದ ಲಲಿತ್ರಾದಿನಗರ ಉತ್ತರ ಬಡಾವಣೆಯ ನಿವೇಶನ ಸಂಖ್ಯೆಯನ್ನು ಲಾಟರಿ ಮೂಲಕ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
 • ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಜರ್ಮನ್ ಪ್ರೆಸ್ ಆವರಣದಲ್ಲಿರುವ ನೂತನ ಜಿಲ್ಲಾಡಳಿತ ಕಚೇರಿ ಕಟ್ಟಡ ಉದ್ಘಾಟನೆ, ಆಡಳಿತ ತರಬೇತಿ ಸಂಸ್ಥೆಯ ಎ.ಟಿ.ಐ ನೂತನ ಆಡಿಟೋರಿಯಂ ಉದ್ಘಾಟನೆ ಹಾಗೂ ಗಾಂಧಿಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು.
 • ಮಧ್ಯಾಹ್ನ 12 ಗಂಟೆಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ 350 ಹಾಸಿಗೆ ಸಾಮಾಥ್ರ್ಯದ ಹೃದ್ರೋಗ ಆಸ್ಪತ್ರೆ, ಮೈಸೂರು ಶಾಖೆಯ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸುವರು.
 • ಮಧ್ಯಾಹ್ನ 12-30 ರಿಂದ 2-30 ರವರೆಗೆ ಪಿ.ಕೆ. ಸ್ಯಾನಿಟೋರಿಯಂ ಆವರಣದಲ್ಲಿ  ನೆಫ್ರೋ ಯುರಾಲಜಿ ನೂತನ ಕಟ್ಟಡದ ಉದ್ಘಾಟನೆ.
 1. ಟ್ರಾಮ ಸೆಂಟರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ.
 2. ನಂಜನಗೂಡು ತಾಲ್ಲೂಕಿನ ಎಸ್. ಹೊಸಕೋಟೆ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಸಂಕೀರ್ಣದಲ್ಲಿ ಪದವಿ ಪೂರ್ವ ಕಾಲೇಜಿನ ಉನ್ನತೀಕರಣ ಕಾಮಗಾರಿ ಶಂಕುಸ್ಥಾಪನೆ.
 3. ಕೆ.ಪಿ.ಟಿ.ಸಿ.ಎಲ್ 2 ಘೀ. 125 ಎಂ.ವಿ.ಎ. 66/11 ಕೆ.ವಿ. ಗ್ಯಾಸ್ ಇನ್ಸೂಲೇಟೆಡ್ ಸ್ಟೇಷನ್, ಕುಕ್ಕರಹಳ್ಳಿ (ಧೋಭಿಘಾಟ್), ಸರಸ್ವತಿಪುರಂ, ವಿದ್ಯುತ್ ಉಪ ಕೇಂದ್ರದ ಉದ್ಘಾಟನೆ.
 4. ಎಸ್.ಎಂ.ಟಿ. 100 ಹಾಸಿಗೆಯುಳ್ಳ ಎಂ.ಸಿ.ಹೆಚ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯ ಶಂಕುಸ್ಥಾಪನೆ.
  ಯೋಗ ಕಾಲೇಜು ಉದ್ಘಾಟನೆ.
 5. ಮೈಸೂರಿನ ತೊಣಜಿ ಕೊಪ್ಪಲು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ (ವಿಭಜಿತ-1) ಶಂಕುಸ್ಥಾಪನೆ.
 6. ಮೈಸೂರು ನಗರದಲ್ಲಿ ಸೋಲಿಗರ ಭವನ ಶಂಕುಸ್ಥಾಪನೆ .
 7. ಟಿ.ನರಸೀಪುರ ತಾಲ್ಲೂಕಿನ ಬೈರಾಪುರದ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಉದ್ಘಾಟನೆ.
 • ಮಧ್ಯಾಹ್ನ 3-30 ಗಂಟೆಗೆ ಅಪೋಲೋ ಆಸ್ಪತ್ರೆಯ ಕೊನೆಯ ಮುಡಾ ನಿವೇಶನ ಗಾಂಧಿ ವಿಚಾರ ಪರಿಷತ್ ಕಟ್ಟಡಕ್ಕೆ ಶಂಕುಸ್ಥಾಪನೆ.
 • ಸಂಜೆ 4-30 ಗಂಟೆಗೆ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ದಿ ಮುಸ್ಲಿಂ ಕೋ-ಆಪರೇಟಿವ್ ಬ್ಯಾಂಕ್ ಲಿ., ಮೈಸೂರು ಇದರ ಶತಮಾನೋತ್ಸವ ಆಚರಣೆ ಮತ್ತು ನೂತನವಾಗಿ ನಿರ್ಮಿಸಿರುವ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
 • ಸಂಜೆ 6 ಗಂಟೆಗೆ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಪೊಲೀಸ್ ಆಯುಕ್ತರ ಕಚೇರಿ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
 • ರಾತ್ರಿ 8 ಗಂಟೆಗೆ ಮೈಸೂರು ವಿಮಾನ ನಿಲ್ದಾಣ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.