ವಿವಾದಾತ್ಮಕ ಹೇಳಿಕೆ ಹಿನ್ನಲೆ: ಬಿಜೆಪಿ ನಾಯಕರಿಗೆ ಹೈಕೋರ್ಟ್ ನೋಟೀಸ್

Kannada News, Regional, Top News No Comments on ವಿವಾದಾತ್ಮಕ ಹೇಳಿಕೆ ಹಿನ್ನಲೆ: ಬಿಜೆಪಿ ನಾಯಕರಿಗೆ ಹೈಕೋರ್ಟ್ ನೋಟೀಸ್ 25

ಬೆಂಗಳೂರು: ವಿವಾದಾತ್ಮಕ ಹೇಳಿಕೆಗಳ ನೀಡಿ ಚರ್ಚೆಗೆ ಗುರಿಯಾಗುವ ಬಿಜೆಪಿ ನಾಯಕರಿಗೆ ಹೈಕೋರ್ಟ್ ನೋಟೀಸ್ ನೀಡಿದೆ.

ಹೌದು. ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನಲೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹಾಗೂ ಶಾಸಕ ಸಿ.ಟಿ.ರವಿ ಅವರಿಗೆ ಹೈಕೋರ್ಟ್ ಗುರುವಾರ ನೋಟಿಸ್ ನೀಡಿದೆ. ಟಿಪ್ಪು ಸುಲ್ತಾನ್ ಜಯಂತಿ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಕೆಯಾಗಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಪೀಠವು, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮೂಂದೂಡಿತು.

ಅರ್ಜಿದಾರರ ಪರ ವಕೀಲ ಮೂರ್ತಿ ಡಿ, ನಾಯಕ್ ಅವರು ವಾದಿಸಿದ್ದರು. ಟಿಪ್ಪು ಜಯಂತಿ ಬಗ್ಗೆ ಅನಂತ್ ಕುಮಾರ್ ಹೆಗಡೆಯವರ ಹಿಂದೆ ಹೇಳಿಕೆ ಹಾಗೂ ಇದರಂತೆ ಕೋಮು ಭಾವನೆ ಕೆರಳಿಸುವ ಟ್ವೀಟ್ ಮಾಡಿದ ಹಿನ್ನಲೆ ಸಿ.ಟಿ.ರವಿಯವರಿಗೂ ಕೂಡ ನೋಟೀಸ್ ಜಾರಿ ಮಾಡಿದೆ.

Related Articles

Leave a comment

Back to Top

© 2015 - 2017. All Rights Reserved.