ತಮ್ಮ ಮೆಚ್ಚಿನ ಮಡದಿಯೊಂದಿಗೆ ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಿದ ಜನಾರ್ದನರೆಡ್ಡಿ

Kannada News, Regional No Comments on ತಮ್ಮ ಮೆಚ್ಚಿನ ಮಡದಿಯೊಂದಿಗೆ ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಿದ ಜನಾರ್ದನರೆಡ್ಡಿ 48

ಬಳ್ಳಾರಿ: ನಿನ್ನೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾಜಿ ಸಚಿವ ಜನಾರ್ದನರೆಡ್ಡಿ ತಮ್ಮ ಮೆಚ್ಚಿನ ಮಡದಿಯನ್ನು ಹೂವಿನಿಂದ ಅಲಂಕಾರ ಮಾಡಿದ ಸಾರೋಟದಲ್ಲಿ ಕೂರಿಸಿ ಸವಾರಿ ಮಾಡಿಸಿದ್ದಾರೆ.

ತಮ್ಮ ಸಾಧನೆಗೆ ಬೆಂಬಲವಾಗಿದ್ದ ಪತ್ನಿ ಲಕ್ಷ್ಮಿ ಅರುಣಾರನ್ನು ಹೂ ಅಲಂಕಾರ ಮಾಡಿದ ಸೈಕಲ್ ಸಾರೋಟದಲ್ಲಿ ಕೂರಿಸಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಿದರು. ಪತ್ನಿಯನ್ನು ಹೂ ಅಲಂಕಾರದ ಸಾರೋಟದಲ್ಲಿ ಕೂರಿಸಿ ತಾವೂ ಸವಾರಿ ಮಾಡುತ್ತಿರುವ ಫೋಟೋಗಳನ್ನು ಜನಾರ್ದನ ರೆಡ್ಡಿ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಹಾಕಿ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಮಹಿಳಾ ದಿನದ ಶುಭಾಶಯಗಳು

ಭೂಮಿಯ ಮೇಲಿನ ಅತ್ಯಂತ ಸುಂದರ ಸೃಷ್ಟಿ ಹೆಣ್ಣು
ನಮಗೆ ಜೀವ ಕೊಟ್ಟಾಕೆ ಹೆಣ್ಣು
ನಮಗೆ ಜೀವನ ಸಂಗಾತಿಯಾಗುವಾಕೆ ಹೆಣ್ಣು
ನಮ್ಮ ಜೀವನದಲ್ಲಿ ತಾಯಿಯಾಗಿ, ಮಡದಿಯಾಗಿ, ಮಗಳಾಗಿ, ಸೋದರಿಯಾಗಿ ನಾನಾ ರೂಪಗಳಲ್ಲಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗುವ ಜೀವವೇ ಹೆಣ್ಣು

ಆಕೆಯ ಪ್ರೀತಿಗೆ, ತ್ಯಾಗಕ್ಕೆ, ಮಮತೆಗೆ ಎಂದಿಗೂ ಬೆಲೆ ಕಟ್ಟಲಾಗದು.

ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತಿದೆ. ಹೆಣ್ಣನ್ನು ಗೌರವಯುತವಾಗಿ ನಡೆಸಿಕೊಳ್ಳುವುದೇ ನಾವು ಆಕೆಗೆ ಸಲ್ಲಿಸುವ ನಿಜ ಗೌರವ. ಪ್ರತಿ ಜೀವಕ್ಕೆ ಜೀವ ನೀಡುವ ಹೆಣ್ಣಿಗೆ, ಅವಳೊಳಗಿನ ತಾಯ್ತನಕ್ಕೆ ಮಹಿಳಾ ದಿನದ ಶುಭಾಶಯ.

ಧನ್ಯವಾದಗಳೊಂದಿಗೆ

ಶ್ರೀ ಗಾಲಿ ಜನಾರ್ಧನ ರೆಡ್ಡಿ

Related Articles

Leave a comment

Back to Top

© 2015 - 2017. All Rights Reserved.