ಸುಪ್ರೀಂಕೋರ್ಟ್’ನಿಂದ ಐತಿಹಾಸಿಕ ತೀರ್ಪು; ದಯಾಮರಣಕ್ಕೆ ಅಸ್ತು

BREAKING NEWS, Kannada News, National No Comments on ಸುಪ್ರೀಂಕೋರ್ಟ್’ನಿಂದ ಐತಿಹಾಸಿಕ ತೀರ್ಪು; ದಯಾಮರಣಕ್ಕೆ ಅಸ್ತು 20

ಹೊಸದಿಲ್ಲಿ: ಇಂದು ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ನಿಷ್ಕ್ರಿಯ ದಯಾಮರಣಕ್ಕೆಅನುಮತಿ ನೀಡುವ ಮೂಲಕ ಸುಪ್ರೀಂಕೋರ್ಟ್‌ ಈ ಮಹತ್ವದ ತೀರ್ಪು ನೀಡಿದೆ.

ಮರಣಶಯ್ಯೆಯಲ್ಲಿರುವ ವ್ಯಕ್ತಿಗೆ ಯಾವಾಗ ಕೊನೆಯುಸಿರೆಳೆಯಬೇಕೆಂದು ನಿರ್ಧರಿಸುವ ಹಕ್ಕಿರುತ್ತದೆ. ಜನರಿಗೆ ಗೌರವದಿಂದ ಸಾವನ್ನಪ್ಪುವ ಸಂಪೂರ್ಣ ಹಕ್ಕಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ನ್ಯಾಯ ಪೀಠ ಈ ಪ್ರಮುಖ ಆದೇಶ ನೀಡಿದೆ. ರೋಗಿಯು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಇನ್ನು ಬದುಕಲು ಸಾಧ್ಯವೇ ಇಲ್ಲ ಎಂದು ಮೆಡಿಕಲ್ ಬೋರ್ಡ್ ಸ್ಪಷ್ಟಪಡಿಸಿದರೆ ರೋಗಿಯು ದಯಾ ಮರಣ ತೆಗೆದುಕೊಳ್ಳಬಹುದು ಎಂದು ಹೇಳಿದೆ.

ನ್ಯಾಯಾಧೀಶರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಪುನಶ್ಚೇತಗೊಳ್ಳುವ ಯಾವುದೇ ಸಾಧ್ಯತೆಗಳು ಇಲ್ಲದ ಪರಿಸ್ಥಿಯಿದ್ದು, ಬದುಕಿರಲು ಇಚ್ಛಿಸದ ವ್ಯಕ್ತಿಗೆ ಸಂಕಷ್ಟದಲ್ಲಿ ಜೀವನ ಮುಂದುವರಿಸುವ ಸ್ಥಿತಿ ಇರಬಾರದು ಎಂದು ಪಂಚ ಸದಸ್ಯ ಪೀಠ ಹೇಳಿದೆ.

Related Articles

Leave a comment

Back to Top

© 2015 - 2017. All Rights Reserved.