ಮಲ್ಲಿಗೆ ನಗರಿಯಲ್ಲಿ ಬಾಡೂಟದ ರಾಜಕೀಯ: ಹೈಕಮಾಂಡ್’ಗೆ ಒತ್ತಡ ಹೇರಲು ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಬಾಡೂಟದ ಆಮಿಷ..!

BREAKING NEWS, Kannada News, Regional, Top News No Comments on ಮಲ್ಲಿಗೆ ನಗರಿಯಲ್ಲಿ ಬಾಡೂಟದ ರಾಜಕೀಯ: ಹೈಕಮಾಂಡ್’ಗೆ ಒತ್ತಡ ಹೇರಲು ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಬಾಡೂಟದ ಆಮಿಷ..! 56

ಮೈಸೂರು: ಮಲ್ಲಿಗೆ ನಗರಿಯಲ್ಲಿ ಬಾಡೂಟದ ರಾಜಕೀಯ ನಡೆಯುತ್ತಿದೆ. ಕಾರ್ಯಕರ್ತರು ಹಾಗೂ ಮತದಾರರನ್ನು ಆಕರ್ಶಿಸಲು ಬಿಜೆಪಿ ಯಿಂದ ಬಾಡೂಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹೌದು. ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಎಲ್. ನಾಗೇಂದ್ರ ಅವರಿಂದ ಈ ಬಾಡೂಟದ ವ್ಯವಸ್ಥೆ ಆಯೋಜನೆಗೊಂಡಿದೆ ಎಂದು ಹೇಳಲಾಗುತ್ತಿದೆ. ಮತದಾರರು ಹಾಗೂ ಕಾರ್ಯಕರ್ತರನ್ನು ಸೆಳೆಯಲು ಬಾಡೂಟದ ಆಮಿಷ ಹೊಡ್ಡಲಾಗಿದೆ. ಆದರೆ ಟಿಕೆಟ್ ಖಾತ್ರಿಗೂ ಮುನ್ನವೇ ನಾಗೇಂದ್ರ ಈ ಆಮಿಷ ಹೊಡ್ಡಿದ್ದು ಈ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿ ಟಿಕೆಟ್ ಪಡೆಯುವ ಆಲೋಚನೆಯಲ್ಲಿದ್ದಾರ ಎಂಬ ಪ್ರಶ್ನೆ ಮೂಡಿದೆ.

ಆದರೆ ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ಆಕಾಕ್ಷಿಗಳ ಪಟ್ಟಿ ದೊಡ್ಡದಿದ್ದು ಅಭ್ಯರ್ಥಿಯ ಆಯ್ಕೆ ತಲೆನೋವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಚುನಾವಣೆಗೂ ಮುನ್ನವೇ ರಾಜಕೀಯ ಪಕ್ಷಗಳು ಬಾಡೂಟದ ಮೂಲಕ ಮತದಾರರನ್ನು ಸೆಳೆಯುವ ಯತ್ನ ಮಾಡುತ್ತಿದೆ. ಈ ಹಿಂದೆ ಇದೇ ಕ್ಷೇತ್ರದ ಜೆಡಿಎಸ್ ನ ರಂಗಪ್ಪ ಅವರಿಂದ ಬಾಡೂಟ ಆಯೋಜನೆ ಮಾಡಿದ್ದರು ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು.

Related Articles

Leave a comment

Back to Top

© 2015 - 2017. All Rights Reserved.