ಒಂದೇ ಟ್ರ್ಯಾಕ್’ನಲ್ಲಿ ಆಗಮಿಸಿದ 2 ರೈಲುಗಳು: ಹಾಸನದಲ್ಲಿ ತಪ್ಪಿತು ದುರಂತ

BREAKING NEWS, Kannada News, Regional, Top News No Comments on ಒಂದೇ ಟ್ರ್ಯಾಕ್’ನಲ್ಲಿ ಆಗಮಿಸಿದ 2 ರೈಲುಗಳು: ಹಾಸನದಲ್ಲಿ ತಪ್ಪಿತು ದುರಂತ 40

ಹಾಸನ: ಚಾಲಕನ ಸಮಯ ಪ್ರಜ್ಞೆಯಿಂದ ಎರಡು ರೈಲುಗಳ ನಡುವೆ ಸಂಭವಿಸಬಹುದಾಗಿದ್ದ ಭಾರೀ ಅಪಘಾತವೊಂದು ತಪ್ಪಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ತಾಳಗುಪ್ಪದಿಂದ ಮೈಸೂರಿಗೆ ಸಾಗಬೇಕಿದ್ದ ಇಂಟರ್‌ಸಿಟಿ ರೈಲು ಮತ್ತು ಮೈಸೂರಿನಿಂದ ಅರಸೀಕೆರೆಗೆ ಹೋಗುವ ಪ್ಯಾಸೆಂಜರ್ ರೈಲುಗಳಿಗೆ ನಗರದ ರೈಲು ನಿಲ್ದಾಣದಲ್ಲಿ ಕ್ರಾಸಿಂಗ್ ವ್ಯವಸ್ಥೆ ಇತ್ತು. ಇಂಟರ್‌ಸಿಟಿ ಮೊದಲ ಟ್ರ್ಯಾಕ್‌ನಲ್ಲೂ, ಪ್ಯಾಸೆಂಜರ್ ರೈಲು 2ನೇ ಟ್ರ್ಯಾಕ್‌ನಲ್ಲೂ ಆಗಮಿಸಬೇಕಿತ್ತು. ಆದರೆ ಎರಡೂ ರೈಲು ಒಂದೇ ಟ್ರ್ಯಾಕ್‌ನಲ್ಲಿ ಆಗಮಿಸಿ ಆತಂಕ ನಿರ್ಮಾಣವಾಗಿತ್ತು. ತಕ್ಷಣ ಇದನ್ನು ಗಮಿಸಿದ ಸಿಬ್ಬಂದಿ ನಿಲ್ದಾಣದ ಸಮೀಪವೇ ಎರಡೂ ರೈಲನ್ನು ನಿಲ್ಲಿಸಿದ್ದಾರೆ.

ಘಟನೆಯ ನಂತರ ಒಂದು ಗಂಟೆಗೂ ಹೆಚ್ಚು ಕಾಲ ರೈಲುಗಳು ಒಂದೇ ಮಾರ್ಗದಲ್ಲಿ ನಿಂತಿವೆ. ಸಿಗ್ನಲ್ ನಿರ್ವಹಣೆಯಲ್ಲಿನ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಒಟ್ಟಾರೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರೀ ಅವಘಡವೊಂದು ತಪ್ಪಿದೆ.

Related Articles

Leave a comment

Back to Top

© 2015 - 2017. All Rights Reserved.