ಲಲಿತಾದ್ರಿನಗರ ಉತ್ತರ ಬಡಾವಣೆಯ ನಿವೇಶನಗಳ ಹಂಚಿಕೆ: ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತದಲ್ಲಿ ಒಂದು ವೇಗ ಸಿಕ್ಕಿದೆ: ಸಿಎಂ

BREAKING NEWS, Kannada News, Regional, Top News No Comments on ಲಲಿತಾದ್ರಿನಗರ ಉತ್ತರ ಬಡಾವಣೆಯ ನಿವೇಶನಗಳ ಹಂಚಿಕೆ: ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತದಲ್ಲಿ ಒಂದು ವೇಗ ಸಿಕ್ಕಿದೆ: ಸಿಎಂ 20

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಲಿತಾದ್ರಿನಗರ ಉತ್ತರ ಬಡಾವಣೆಯ ನಿವೇಶನಗಳ ಸಂಖ್ಯೆಯನ್ನು ಲಾಟರಿ ಮೂಲಕ ವಿತರಿಸುವ ಕಾರ್ಯಕ್ರಮ ನಡೆಯಿತು.

ಲಲಿತಾದ್ರಿನಗರ ಉತ್ತರ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಈ ನಂತರ ಮಾತನಾಡಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತದಲ್ಲಿ ಒಂದು ವೇಗ ಸಿಕ್ಕಿದೆ. ಬಹಳ ದಿನಗಳಿಂದ ನೆನೆಗುದಿಗೆಗೆ ಬಿದ್ದಿದ್ದ ಆರ್.ಟಿ ನಗರ ಸೈಟ್ ಹಂಚಿಕೆ ಕೋರ್ಟಿಗೆಲ್ಲಾ ಹೋಗಿದ್ದರಿಂದ ಬಹಳ ವಿಳಂಭವಾಗಿತ್ತು ಅದಕ್ಕೀಗ ಮುಕ್ತಿ ಸಿಕ್ಕಿದೆ. ಸೈಟ್ ಗಳನ್ನು ವಿತರಣೆ ಮಾಡಿದ್ದೇವೆ. ಅದರಂತೆ ಇಲ್ಲೂ ಕೂಡ ಬಹಳ ದಿನಗಳಿಂದ ಸೈಟ್ ಹಂಚಿಕೆ ಮಾಡವಂತಹದ್ದು ವಿಳಂಭವಾಗಿತ್ತು. ಇಲ್ಲಿ 440 ಎಕರೆ 25 ಗುಂಟೆ ಜಮೀನಿನಲ್ಲಿ ಲಲಿತಾದ್ರಿ ನಗರ ಬಡಾವಣೆಗಳನ್ನು ಲಾಟರಿ ಎತ್ತುವ ಮೂಲಕ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ನಗರಾಭಿವೃದ್ಧಿ ಹಾಗೂ ಹಜ್ ಸಚಿವ ರೋಷನ್ ಬೇಗ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ತನ್ವೀರ್ ಸೇಠ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಹೆಚ್.ಪಿ. ಮಂಜುನಾಥ್, ರೇಷ್ಮೆ ಉದ್ದಿಮಗಳ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಕೆ. ಸೋಮಶೇಖರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ. ಧ್ರುವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಹಾಗೂ ಇನ್ನಿತರ ಗಣ್ಯರು ಭಾಗವಹಿಸುವರು.

Related Articles

Leave a comment

Back to Top

© 2015 - 2017. All Rights Reserved.