ಲಲಿತ ಮಹಲ್ ಮಾದರಿಯ ನೂತನ ಜಿಲ್ಲಾಡಳಿತ ಕಛೇರಿಗೆ ಸಿಎಂ ಶಿಲಾನ್ಯಾಸ

BREAKING NEWS, Kannada News, Regional, Top News No Comments on ಲಲಿತ ಮಹಲ್ ಮಾದರಿಯ ನೂತನ ಜಿಲ್ಲಾಡಳಿತ ಕಛೇರಿಗೆ ಸಿಎಂ ಶಿಲಾನ್ಯಾಸ 24

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ನೂತನ ಜಿಲ್ಲಾಧಿಕಾರಿಗಳ ಕಚೇರಿ ಉದ್ಘಾಟನೆ ಕಾರ್ಯ ನೆರವೇರಿಸಿದರು.

ಮೈಸೂರಿನ ಸಿದ್ಧಾರ್ಥ ನಗರದ ಜರ್ಮನ್ ಪ್ರೆಸ್ ಆವರಣದಲ್ಲಿರುವ ಲಲಿತ ಮಹಲ್ ಮಾದರಿಯಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಡಳಿತ ಕಚೇರಿಯನ್ನು ಶಿಲಾನ್ಯಾಸ ನೇರವೇರಿಸಿ ಟೇಪ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.

ಸಿದ್ದಾರ್ಥನಗರದ ಜರ್ಮನ್ ಪ್ರೆಸ್ ಆವರಣದಲ್ಲಿ 59 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾಡಳಿತ ಭವನ ತಲೆಯೆತ್ತಿದೆ. ಬೆಂಗಳೂರಿನ ವಿಕಾಸಸೌಧ ಮತ್ತು ಬೆಳಗಾವಿಯ ಸುವರ್ಣ ಸೌಧವನ್ನು ನಿರ್ವಿುಸಿದ ಬಿ.ಜಿ. ಶಿರ್ಕೆ ಕನ್ಸ್​ಟ್ರಕ್ಷನ್ ಟೆಕ್ನಾಲಜಿ ಸಂಸ್ಥೆಯೇ ಇದನ್ನು ನಿರ್ವಿುಸಿದೆ. ಈ ಗುತ್ತಿಗೆದಾರರು ನಿಗದಿತ 18 ತಿಂಗಳ ಪೈಕಿ ಮೂರು ತಿಂಗಳು ಮುನ್ನವೇ ಕಾಮಗಾರಿ ಮುಗಿಸಿಕೊಟ್ಟಿದ್ದಾರೆ.

59 ಕೋಟಿ ರೂ.ವೆಚ್ಚದಲ್ಲಿ ನಿರ್ವಣಗೊಳ್ಳುವ ಮೊದಲ ಹಂತದ ಕಟ್ಟಡದಲ್ಲಿ 11 ಕಚೇರಿಗಳು, 200 ಜನರು ಕುಳಿತು ಕೊಳ್ಳಬಹುದಾದ 6 ಸಭಾಂಗಣಗಳಿವೆ. ತಳಮಹಡಿಯಲ್ಲಿ ವಾಹನ ನಿಲುಗಡೆಗೆ, ನೆಲಮಹಡಿಯಲ್ಲಿ ಜಿಲ್ಲಾ ಖಜಾನೆ ಮತ್ತು ಮುಜರಾಯಿ ಇಲಾಖೆಗೆ, 1ನೇ ಮಹಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಅವಕಾಶ ಕಲ್ಪಿಸಲಾಗಿದೆ. 2ನೇ ಮಹಡಿಯಲ್ಲಿ ಹಿಂದುಳಿದ ವರ್ಗದ ಅಭಿವೃದ್ಧಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾನೂನುಮಾಪನ ಶಾಸ್ತ್ರ, ಮೀನುಗಾರಿಕೆ ಇಲಾಖೆ, ಅಬಕಾರಿ ಇಲಾಖೆ, ಜಿಲ್ಲಾ ಆಯುಷ್, ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ಕಚೇರಿಗೆ ಇಲ್ಲಿ ಸ್ಥಳಾವಕಾಶ ನೀಡ ಲಾಗಿದೆ. ಪ್ರತಿ ಮಹ ಡಿಯಲ್ಲೂ ಪ್ರತ್ಯೇಕ ವಾದ ಎರಡು ಸಭಾಂಗಣಗಳಿವೆ. ಪ್ರತಿ ಕಚೇರಿಗೂ ಪ್ರತ್ಯೇಕ ಶೌಚ ಗೃಹವಿದೆ. 40 ಕೋಟಿ ರೂ.ವೆಚ್ಚದಲ್ಲಿ ನಿರ್ವ ಣಗೊಳ್ಳುವ 2ನೇ ಹಂತದ ಕಾಮಗಾರಿಯಲ್ಲಿ 350 ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂ ಗಣ ಹಾಗೂ 17 ಕಚೇರಿಗಳು ನಿರ್ವಣಗೊಳ್ಳಲಿವೆ. ಇಲ್ಲಿ ಒಟ್ಟು 28 ಜಿಲ್ಲಾ ಮಟ್ಟದ ಕಚೇರಿಗಳು ಒಂದೇ ಸೂರಿನಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.