ಫ್ರಾನ್ಸ್ ಅಧ್ಯಕ್ಷ ಭಾರತಕ್ಕೆ ಭೇಟಿ: ಎರಡೂ ದೇಶಗಳ ನಡುವೆ 14 ಪ್ರಮುಖ ಒಪ್ಪಂದಗಳಿಗೆ ಸಹಿ

Kannada News, National No Comments on ಫ್ರಾನ್ಸ್ ಅಧ್ಯಕ್ಷ ಭಾರತಕ್ಕೆ ಭೇಟಿ: ಎರಡೂ ದೇಶಗಳ ನಡುವೆ 14 ಪ್ರಮುಖ ಒಪ್ಪಂದಗಳಿಗೆ ಸಹಿ 40

ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಭಾರತಕ್ಕೆ ಭೇಟಿ ನೀಡಿದ್ದು ಈ ವೇಳೆ ಎರಡೂ ದೇಶಗಳ ನಡುವೆ 14 ಪ್ರಮುಖ ಒಪ್ಪಂದಗಳಿಗೆ ಸಹಿಹಾಕಲಾಗಿದೆ.

ಶಿಕ್ಷಣ, ಪರಿಸರ, ನಗರಾಭಿವೃದ್ಧಿ, ರೈಲ್ವೆ ಕ್ಷೇತ್ರಗಳಲ್ಲಿ ನಡೆದ ವಿವಿಧ ಒಪ್ಪಂದಗಳ ಮೌಲ್ಯ 16 ಬಿಲಿಯನ್ ಡಾಲರ್, ಅಂದರೆ ಸುಮಾರು 10 ಲಕ್ಷ ಕೋಟಿ ರೂ ಇದೆ. ದಾವಣಗೆರೆಯಲ್ಲಿ ಫ್ರಾನ್ಸ್​ನ ಸುಯೆಜ್ ಸಂಸ್ಥೆಯ ವಾಟರ್ ಸಿಸ್ಟಮ್ ಮಾಡರ್ನೈಸೇಶನ್ ಪ್ರಾಜೆಕ್ಟ್, ಏರ್​ಲೈನ್ ಸ್ಪೈಸ್​ಜೆಟ್ ಮತ್ತು ಎಂಜಿನ್​ಗಳ ಸರಬರಾಜು ಇತ್ಯಾದಿ ಯೋಜನೆಗಳು ಇದರಲ್ಲಿ ಸೇರಿವೆ.

ಇದಕ್ಕೂ ಮುನ್ನ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ನಾಲ್ಕು ದಿನಗಳ ಕಾಲ ಭಾರತದ ಪ್ರವಾಸಕ್ಕೆ ನಿನ್ನೆ ಆಗಮಿಸಿದ್ದಾರೆ. ಇಂದಿರಾ ಗಾಂಧಿ ಏರ್​ಪೋರ್ಟ್​ನಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷರನ್ನು ಬರಮಾಡಿಕೊಂಡರು. ಫ್ರಾನ್ಸ್ ಅಧ್ಯಕ್ಷರ ಜೊತೆ ಅವರ ಪತ್ನಿ ಮೇರೀ ಕ್ಲಾಡೆ ಮ್ಯಾಕ್ರೋನ್ ಹಾಗೂ ಪ್ರಧಾನಿ ಸಂಪುಟದ ಹಿರಿಯ ಸಚಿವರು ಆಗಮಿಸಿದರು. ಇಂದು ಬೆಳಗ್ಗೆ ನರೇಂದ್ರ ಮೋದಿ ಮತ್ತು ಮ್ಯಾಕ್ರೋನ್ ನಡುವೆ ಸುದೀರ್ಘ ಮಾತುಕತೆ ನಡೆಯಿತು. ಅದರ ಬೆನ್ನಲ್ಲೇ 14 ಒಪ್ಪಂದಗಳಿಗೆ ಸಹಿ ಬಿದ್ದವು.

Related Articles

Leave a comment

Back to Top

© 2015 - 2017. All Rights Reserved.