ಮೈಸೂರು ವಿವಿ 98ನೇ ಘಟಿಕೋತ್ಸವ: ಪದವಿ ಪ್ರದಾನ;- ಈ ಭಾರಿ ಮಹಿಳೆಯರದ್ದೇ ಪಾರುಪತ್ಯ

BREAKING NEWS, Kannada News, Regional, Top News No Comments on ಮೈಸೂರು ವಿವಿ 98ನೇ ಘಟಿಕೋತ್ಸವ: ಪದವಿ ಪ್ರದಾನ;- ಈ ಭಾರಿ ಮಹಿಳೆಯರದ್ದೇ ಪಾರುಪತ್ಯ 28

ಮೈಸೂರು: ಇಂದು ಮೈಸೂರು ವಿಶ್ವವಿದ್ಯಾನಿಲಯದ ತೊಂಭತ್ತೆಂಟನೆಯ ವಾರ್ಷಿಕ ಘಟಿಕೋತ್ಸವ ನಡೆದಿದ್ದು, ಒಟ್ಟು 27502 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯ್ತು.

ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧ ಕ್ರಾಫರ್ಡ್’ಹಾಲ್ ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆ ಅವರು ವಿವಿಧ ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.

ಈ ನಂತರ ಘಟಿಕೋತ್ಸವದ ಭಾಷಣ ಮಾಡಿ ಉತ್ಕೃಷ್ಟತೆಯನ್ನು ಸಾಧಿಸಬೇಕಾದರೆ, ಅದರಲ್ಲೂ ವಿಶೇಷವಾಗಿ ಶಿಕ್ಷಣದಲ್ಲಿ ಪೂರಕ ವಾತಾವರಣವನ್ನು ನಿರ್ಮಿಸಬೇಕಾದುದು ಅಗತ್ಯವೆಂದು ದೃಢವಾಗಿ ನಂಬಿದ್ದೇನೆ. ಇಂದು ಪದವೀಧರರಾಗುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನೂ ಅಭಿನಂದಿಸುತ್ತೇನೆ. ಇಂದು ನೀವು ಸಂತೋಷವಾಗಿರುವ ದಿನ ಇದಕ್ಕೆ ನಿಮ್ಮ ತಂದೆ ತಾಯಿ ಹಾಗೂ ಹಲವರು ಕಾರಣಕರ್ತರಾಗಿದ್ದಾರೆ. ಈ ದಿನ ಅವರೆಲ್ಲರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗೆಯೆ ನಿಮ್ಮ ಯಶಸ್ಸಿಗೆ ಕಾರಣರಾದವರನ್ನು ನೀವು ಕೃತಜ್ಞತೆಯಿಂದ ನೆನೆಯಿರಿ.

ಈ ಸಂಭ್ರಮ ಮುಗಿದ ನಂತರ ನಿಮ್ಮ ಜೀವನ ಯಾತ್ರೆಯ ಎರಡನೆಯ ಘಟ್ಟ ಪ್ರಾರಂಭವಾಗಲಿದೆ. ಕೆಲವರು ವೃತ್ತಿ ಶಿಕ್ಷಣವನ್ನು ಮುಂದುವರೆಸಬಹುದು, ಇನ್ನು ಕೆಲವರು ವೃತ್ತಿ ಜೀವನವನ್ನು ಪ್ರವೇಶಿಸಬಹುದು. ಅವರೆಲ್ಲರಿಗೂ ಅಭಿನಂದನೆಗಳು.

ತಾರತಮ್ಯವುಳ್ಳ ಸಮಾಜಿಕ ಸನ್ನಿವೇಶಕ್ಕೆ ನೀವೆಲ್ಲ ಪ್ರವೇಶ ಮಾಡುತ್ತಿದ್ದೀರಿ. ಇಂಥಹ ತಾರತಮ್ಯವುಳ್ಳ ಸಮಾಜದ ಅಸಮಾನತೆಗಳನ್ನು ತೊಡೆದುಹಾಕಿ, ಹಸಿವು ಮತ್ತು ಕಣ್ಣೀರನ್ನು ಹೋಗಲಾಡಿಸುವ ತಾವೆಲ್ಲ ಸಿದ್ಧರಿರಬೇಕು ಎಂದು ಸಲಹೆ ನೀಡಿದರು.

ಒಟ್ಟು 27502 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದ್ದು, ಅವರಲ್ಲಿ 17122 ಮಹಿಳೆಯರು, 10380 ಪುರುಷರು, ವಿವಿಧ ವಿಷಯಗಳಲ್ಲಿ 575 ಅಭ್ಯರ್ಥಿಗಳಿಗೆ ಪಿಹೆಚ್.ಡಿ.ಪದವಿಯನ್ನು ಪ್ರದಾನ ಮಾಡಲಾಯ್ತು. ಅವರಲ್ಲಿ 263 ಮಹಿಳೆಯರು, 312 ಪುರುಷರು.

ಒಟ್ಟು 348 ಪದಕಗಳು ಮತ್ತು 168 ಬಹುಮಾನಗಳನ್ನು 207 ಅಭ್ಯರ್ಥಿಗಳು ಪಡೆದಿದ್ದು, ಅವರಲ್ಲಿ 145 ಮಹಿಳೆಯರು 7576 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯ್ತು. ಅವರಲ್ಲಿ 4213 ಮಹಿಳೆಯರು,19,351 ಅಭ್ಯರ್ಥಿಗಳಿಗೆ ಸ್ನಾತಕ ಪದವಿಯನ್ನು ಪ್ರದಾನಿಸಲಾಯ್ತು. ಅವರಲ್ಲಿ 12.645 ಮಹಿಳೆಯರು.  ಕಲಾ ನಿಕಾಯದಲ್ಲಿ  ಪಿಹೆಚ್ ಡಿ 234 ಮಹಿಳಾ ಅಭ್ಯರ್ಥಿಗಳು 100, ಒಟ್ಟು 101ಪದಕ ಇವರಲ್ಲಿ ಮಹಿಳಾ ಅಭ್ಯರ್ಥಿಗಳು 73, ಸ್ನಾತಕೋತ್ತರ ಪದವಿಗೆ ಅರ್ಹರಾದವರು 1864, ಮಹಿಳಾ ಅಭ್ಯರ್ಥಿಗಳು 1034, ಸ್ನಾತಕ ಪದವಿಗೆ ಅರ್ಹರಾದವರು 3835, ಇವರಲ್ಲಿ ಮಹಿಳಾ ಅಭ್ಯರ್ಥಿಗಳು 2504 ಇದ್ದಾರೆ.

ಒಟ್ಟು ಪದವಿಗೆ ಅರ್ಹರಾದವರು 5699 ಇವರಲ್ಲಿ ಮಹಿಳಾ ಅಭ್ಯರ್ಥಿಗಳು 3538, ವಾಣಿಜ್ಯ ವಿಭಾಗದಲ್ಲಿ ಪಿಹೆಚ್.ಡಿ 53 ಮಹಿಳಾ ಅಭ್ಯರ್ಥಿಗಳು 24, ಒಟ್ಟು ಪದಕ 32, ಮಹಿಳಾ ಅಭ್ಯರ್ಥಿಗಳು 24, ಸ್ನಾತಕೋತ್ತರ ಪದವಿಗೆ ಅರ್ಹರಾದವರು 3729, ಮಹಿಳಾ ಅಭ್ಯರ್ಥಿಗಳು 1920, ಸ್ನಾತಕ ಪದವಿಗೆ ಅರ್ಹರಾದವರು 9912, ಮಹಿಳಾ ಅಭ್ಯರ್ಥಿಗಳು 6156, ಒಟ್ಟು ಪದವಿಗೆ ಅರ್ಹರಾದವರು 13641, ಮಹಿಳಾ ಅಭ್ಯರ್ಥಿಗಳು 8076.

ಶಿಕ್ಷಣ ನಿಕಾಯದಲ್ಲಿ ಪಿ.ಹೆಚ್.ಡಿ 22, ಮಹಿಳಾ ಅಭ್ಯರ್ಥಿಗಳು 7, ಒಟ್ಟು ಪದಕ 9 ಮಹಿಳಾ ಅಭ್ಯರ್ಥಿಗಳು 4, ಸ್ನಾತಕೋತ್ರ ಪದವಿ 91, ಮಹಿಳಾ ಅಭ್ಯರ್ಥಿಗಳು 36, ಸ್ನಾತಕ ಪದವಿ 2213, ಮಹಿಳಾ ಅಭ್ಯರ್ಥಿಗಳು 1509, ಒಟ್ಟು ಪದವಿ 2304, ಮಹಿಳಾ ಅಭ್ಯರ್ಥಿ 1545, ಕಾನೂನು ನಿಕಾಯ ಪಿಹೆಚ್.ಡಿ.8, ಮಹಿಳಾ ಅಭ್ಯರ್ಥಿಗಳು 6, ಒಟ್ಟು ಪದಕ 3, ಮಹಿಳಾ ಅಭ್ಯರ್ಥಿಗಳು 2, ಸ್ನಾತಕೋತ್ತರ ಪದವಿ 17, ಮಹಿಳಾ ಅಭ್ಯರ್ಥಿಗಳು 12, ಸ್ನಾತಕ ಪದವಿ 0, ಒಟ್ಟು ಪದವಿಗೆ ಅರ್ಹರಾದವರು 17, ಮಹಿಳಾ ಅಭ್ಯರ್ಥಿಗಳು 12, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ಪಿಹೆಚ್.ಡಿ, 258, ಮಹಿಳಾ ಅಭ್ಯರ್ಥಿಗಳು 126, ಒಟ್ಟು ಪದಕ 62, ಮಹಿಳಾ ಅಭ್ಯರ್ಥಿಗಳು 49, ಸ್ನಾತಕೋತ್ತರ ಪದವಿ 1875, ಮಹಿಳಾ ಅಭ್ಯರ್ಥಿಗಳು 1211, ಸ್ನಾತಕ ಪದವಿ 3391, ಮಹಿಳಾ ಅಭ್ಯರ್ಥಿಗಳು 2477, ಒಟ್ಟು ಪದವಿಗೆ ಅರ್ಹರಾದವರು 5266, ಮಹಿಳಾ ಆಭ್ಯರ್ಥಿಗಳು 3688.

ಕಾರ್ಯಕ್ರಮದಲ್ಲಿ ಪ್ರಭಾರ ಕುಲಪತಿಗಳಾದ ಪ್ರೊ. ಸಿ ಬಸವರಾಜು, ಕುಲಸಚಿವರಾಸ ಡಿ ಭಾರತಿ, ಪರೀಕ್ಷಾಂಗ ಕುಲಸಚಿವ ಪ್ರೊ. ಜೆ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.