ನೀವು ನೀಡುವ ಮತ ನನಗೆ, ಕುಮಾರಣ್ಣನಿಗಲ್ಲ; ರೈತನಿಗೆ: ಜಿ.ಟಿ ದೇವೇಗೌಡ

Kannada News, Regional No Comments on ನೀವು ನೀಡುವ ಮತ ನನಗೆ, ಕುಮಾರಣ್ಣನಿಗಲ್ಲ; ರೈತನಿಗೆ: ಜಿ.ಟಿ ದೇವೇಗೌಡ 32

ಮೈಸೂರು: “ನೀವು ನೀಡುವ ಒಂದೊಂದು ವೋಟು ನನಗಲ್ಲ ಅಥವಾ ಕುಮಾರಸ್ವಾಮಿ ಅವರಿಗಲ್ಲ ಬದಲಾಗಿ ಬಡರೈತನಿಗೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತನ ಉಳಿವಿಗಾಗಿ ನೀವು ಜೆಡಿಎಸ್ ಗೆ ಮತ ನೀಡಬೇಕಿದೆ,” ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಅವರು ಹೇಳಿದರು.

ಇಂದು ಮೈಸೂರು ತಾಲ್ಲೂಕು ನಾಗನಹಳ್ಳಿ ಗ್ರಾಮದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟ ದಿಂದ ಹೊಸದಾಗಿ ನಿರ್ಮಿಸಿರುವ ಬಲ್ಕ್ ಮಿಲ್ಕ್ ಕೂಲರ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಇಂದು ನಾಗನಹಳ್ಳಿ ಗ್ರಾಮಕ್ಕೆ ಸಂತೋಷದ ದಿನ. ಇವತ್ತು ಹಾಲು ಒಕ್ಕೂಟ ಬಿ.ಎಂ.ಸಿ(ಬುಲ್ಕ್ ಮಿಲ್ಕ್ ಕೂಲರ್) ಸೆಂಟರ್ ಅನ್ನು ಕೊಟ್ಟಿದ್ದೆ. ಅವರೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು. ಅವರು ಒಂದು ಮನವಿ ಮಾಡಿದ್ದಾರೆ ಹಾಲಿನ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು. ಅದು ನಮ್ಮೆಲ್ಲರ ಜವಾಬ್ದಾರಿ. ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಪಟೇಲರಾಗಿದ್ದರು. ಅಂದು ಗುಜರಾತಿನ ಹಳ್ಳಿಯಲ್ಲಿ ಉತ್ಪಾದಕರ ಸಹಕಾರ ಸಂಘ ಪ್ರಾರಂಭ ಮಾಡಲಾಗಿತ್ತು. ಶಾಸ್ತ್ರಿ ಅವರು ಡಾ ಕುರಿಯನ್ ಅವರಿಗೆ ಹೇಳುತ್ತಾರೆ, ನಮ್ಮೂರಿಗೆ ಅಧ್ಯಕ್ಷರನ್ನಾಗಿ ಮಾಡುತ್ತೇನೆ. ನೀನು ಚೆನ್ನಾಗಿ ಕೆಲಸ ಮಾಡಪ್ಪ ಅಂತ. ನಾನು ಹಾಗೆ ಮಾಡಲ್ಲ ರಾಜಕೀಯ ಜಾಸ್ತಿ. ರಾಜಕೀಯ ಪ್ರವೇಶ ಮಾಡಿದರೆ ಯಾವುದೇ ಸಹಕಾರ ಸಂಸ್ಥೆ ಉಳಿಯಲ್ಲ, ಸ್ವತಂತ್ರವಾಗಿ, ಸರ್ಕಾರದ ಮಧ್ಯಪ್ರವೇಶವಿಲ್ಲದೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಕೆಲಸ ಮಾಡುವೆ ಎನ್ನುತ್ತಾರೆ ಕುರಿಯನ್. ಹೀಗಾಗಿ ಆ ಕಾಲದಲ್ಲಿ ಶಾಸ್ತ್ರಿ ಅವರು ಕುರಿಯನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಕುರಿಯನ್ ಅವರು ಅಷ್ಟೇ ಪ್ರಾಮಾಣಿಕವಾಗಿ ಹಾಲಿನ ಕ್ಷೇತ್ರಕ್ಕೆ ತಮ್ಮ ಸೇವೆಯನ್ನ ಮುಡುಪಾಗಿಟ್ಟಿದ್ದರು. ಇಡೀ ದೇಶದಲ್ಲೇ ರೈತರಿಗೆ ಯಶಸ್ಸನ್ನು ತಂದುಕೊಟ್ಟರು. ಅದೇ ರೀತಿ ಕೋಲಾರ ಕೃಷ್ಣಪ್ಪ ಅವರು ಕೇಂದ್ರದಲ್ಲಿ ರಾಜ್ಯ ಸಚೀವರಾಗಿದ್ದರು. ಅವರು ಹಾಲ್ಯಾಂಡ್ ನಿಂದ ಹಸುವನ್ನು ಹಡಗಿನಿಂದ ತಂದು ಬನ್ನೇರುಘಟ್ಟದಲ್ಲಿ ಸಾಕಿ ಎಲ್ಲರಿಗೂ ಪರಿಚಯಸಿದವರು ಅವರು,” ಎಂದರು.

“ನಾವು ಇಂದಿಗೂ ಉಳಿಯಬೇಕು ಎಂದರೆ, ಬೀಕರ ಬರಗಾಲ ಬಂದರೆ, ಮಳೆ ಜಾಸ್ತಿಯಾದಾಗ, ಬೆಳೆ ನಷ್ಟವಾದಾಗ, ರೋಗಗಳು ಬಂದಾಗ, ಕಷ್ಟದಲ್ಲಿ ಕಾಪಾಡವಂತಹದ್ದು ಹಾಲು. ಅಲ್ಲದೆ ಹಾಲು ಉತ್ಪಾದಕರಿಗೆ ತಮ್ಮ ಮಕ್ಕಳ ಶಿಕ್ಷಣಕ್ಕೆ , ಆರೋಗ್ಯಕ್ಕೆ, ವ್ಯವಸಾಯದ ಖರ್ಚಿಗೆ ಎಲ್ಲದಕ್ಕೂ ಇರುವುದು ಒಂದೇ ಒಂದು ಸಂಜೀವಿನಿ ಅದು ಹಾಲು. ಹೀಗಾಗಿ ತಾವೆಲ್ಲ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡರೆ ಉತ್ತಮ ಯಶಸ್ಸು ಖಂಡಿತ,” ಎಂದು ಹೇಳಿದರು.

“ನಾಗನಹಳ್ಳಿ ತನ್ನದೆಯಾದ ಐತಿಹಾಸಿಕ ಹಿನ್ನಲೆಯುಳ್ಳ ಗ್ರಾಮ. ದೇವೇಗೌಡರು ಪ್ರಧಾನಿಗಳಾಗಿದ್ದರು ಆಗ ರೇವಣ್ಣ ಅವರು ಕೆ.ಎಂ.ಎಫ್ ಅಧ್ಯಕ್ಷರಾಗಿದ್ದರು. ಸ್ಟೆಪ್ ಯೋಜನೆ ಮೂಲಕ ಹಾಲು ಉತ್ಪಾದಕರನ್ನ ದೇಶದಾದ್ಯಂತ ಪ್ರವಾಸ ಮಾಡಿಸಿದ್ದರು. ಆ ವೇಳೆ ರೇವಣ್ಣ ನಾನು, ನಂಜಪ್ಪ ಅವರು ರೈಲಿನಲ್ಲಿ ಬರಬೇಕಾದರೆ ನಾಗನಹಳ್ಳಿ ಪರಿಸ್ಥಿತಿ ನೋಡಿ ಇಲ್ಲಿ ರೈಲು ನಿಲ್ದಾಣವಾಗಬೇಕು ಎಂದು ಇಲ್ಲಿ ಮತ್ತು ಕೆ.ಆರ್ ನಗರ ಸೇರಿದಂತೆ ಇನ್ನಿತರ ಕಡೆ ಗುರುತು ಮಾಡಿಕೊಂಡು ಹೋಗಿದ್ದೆವು. ಹೀಗಾಗಿ ಪ್ರತಾಪ್ ಸಿಂಹ ಅವರೊಂದಿಗೆ ಮಾತಾಡಿದ್ದರ ಫಲವಾಗಿ ಇಂದು ನಾಗನಹಳ್ಳಿಗೆ ರೈಲ್ವೆ ಪ್ರಾಜೆಕ್ಟ್ ಮಂಜೂರಾಗಿದೆ. ಇದರಿಂದ ಈ ಭಾಗದಲ್ಲಿ ರೈತರಿಗೆ ಸಹಕಾರಿಯಾಗಿದೆ. ಯುವಕರಿಗೆ ಉದ್ಯೋಗ ದೊರಕಲಿದೆ. ಮುಖ್ಯವಾಗಿ ರೈತರ ಜಮೀನಿಗೆ ಚಿನ್ನದಂತಹ ಬೆಲೆ ಬಂದಿದೆ. ಮುಂದೆ ಇದು ಆರ್ಥಿಕ, ವಾಣಿಜ್ಯ ಕೇಂದ್ರವಾಗಲಿದೆ,” ಎಂದು ತಿಳಿಸಿದರು.

“ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ರೈತರು ಇಂದು ಬ್ಯಾಂಕುಗಳಲ್ಲಿ ಎಷ್ಟೇ ಸಾಲ ಮಾಡಿದ್ದರೂ ಸಾಲ ನನ್ನ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ, ಮಾಡೇ ಮಾಡುತ್ತಾರೆ. ಹಿರಿಯ ನಾಗರೀಕರಿಗೆ 5000 ಕೊಡುವಂತಹದನ್ನು 70 ವರ್ಷಕ್ಕೆ ನಿಲ್ಲಿಸಿದ್ದಾರೆ. ಹೀಗಾಗಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ 5000 ನೀಡುತ್ತೇವೆ ಎಂಬ ಘೋಷಣೆಯನ್ನೂ ಮಾಡಿದ್ದಾರೆ. ಇಸ್ರೇಲ್ ಮಾದರಿ ಬೇಸಾಯಕ್ಕೂ ಸಹ ಸಬ್ಸಿಡಿ, ಗೊಬ್ಬರ ಪ್ರತಿಯೊಂದು ಕೂಡ ರೈತರ ಪರವಾದ ಕೆಲಸ ಮಾಡುವುದು ನಿಮ್ಮ ಜನತಾದಳ ಪಕ್ಷ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ನೀವು ಕೊಡುವ ಒಂದೊಂದು ವೋಟು ನನಗಲ್ಲ ಅಥವಾ ಕುನಾರಸ್ವಾಮಿ ಅವರಿಗಲ್ಲ. ಬಡರೈತನಿಗೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತನ ಉಳಿವಿಗಾಗಿ ಮತ ನೀಡಬೇಕಿದೆ,” ಎಂದು ಕೇಳಿಕೊಂಡರು.

Related Articles

Leave a comment

Back to Top

© 2015 - 2017. All Rights Reserved.