ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Kannada News, Sports No Comments on ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ 19

ಕೊಲಂಬೋ: ಇಲ್ಲಿ ನಡೆದ ತ್ರಿಕೋನ ಟಿ-20 ಸರಣಿಯ 4ನೇ ಪಂದ್ಯದಲ್ಲಿ ಲಂಕಾ ವಿರುದ್ಧ ಭಾರತ 6 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ.

ಶ್ರೀಲಂಕಾ ನೀಡಿದ್ದ 153 ರನ್’ಗಳ ಗುರಿ ಬೆನ್ನತ್ತಿದ ಭಾರತ ತಂಡ 17.3 ಓವರ್’ಗಳಲ್ಲಿ ಗೆಲುವಿನ ದಡ ತಲುಪಿತು. ಅಜೇಯ 42 ರನ್ ಸಿಡಿಸಿದ‌ ಮನೀಶ್ ಪಾಂಡೆ, 39 ರನ್ ಸಿಡಿಸಿದ ದಿನೇಶ್ ಕಾರ್ತಿಕ್ ಗೆಲುವಿನ ರೂವಾರಿಯಾದರು. ಈ ಪಂದ್ಯದಲ್ಲೂ ನಾಯಕ ರೋಹಿತ್ ಶರ್ಮಾ ನಿರಾಸೆ ಮೂಡಿಸಿದರು. ಈ ಪಂದ್ಯದಲ್ಲಿ ಅವಕಾಶ ಪಡೆದಿದ್ದ ರಾಹುಲ್ ಸಹ 18 ರನ್’ಗೆ ಸುಸ್ತಾದರು.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ: 152/9

ಕುಸಲ್ ಮೆಂಡಿಸ್ – 55, ತರಂಗಾ 22, ಶಾರ್ದೂಲ್ ಠಾಕೂರ್ 27/4, ವಾಷಿಂಗ್ಟನ್ ಸುಂದರ್ 21/2

ಭಾರತ: 153/4 (17.3 ಓವರ್’ಗಳಲ್ಲಿ)

ಮನೀಶ್ ಪಾಂಡೆ 44, ದಿನೇಶ್ ಕಾರ್ತಿಕ್ 39, ಅಕಿಲ ಧನಂಜಯ 19/2

Related Articles

Leave a comment

Back to Top

© 2015 - 2017. All Rights Reserved.