ಮಂಗಳೂರು ಪಬ್ ದಾಳಿ ಪ್ರಕರಣ: ಪ್ರಮೋದ್ ಮುತಾಲಿಕ್ ಸೇರಿ 26 ಮಂದಿ ಆರೋಪಿಗಳ ಖುಲಾಸೆ

Crime, Kannada News, Regional No Comments on ಮಂಗಳೂರು ಪಬ್ ದಾಳಿ ಪ್ರಕರಣ: ಪ್ರಮೋದ್ ಮುತಾಲಿಕ್ ಸೇರಿ 26 ಮಂದಿ ಆರೋಪಿಗಳ ಖುಲಾಸೆ 21

ಮಂಗಳೂರು: 2009ರ ಪಬ್ ದಾಳಿ ಪ್ರಕರಣಕ್ಕೆ ಇತಿಶ್ರೀ ಬಿದ್ದಿದ್ದು, ಎಲ್ಲ 26 ಮಂದಿ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.

ಸುದೀರ್ಘ ವಿಚಾರಣೆ ಬಳಿಕ ಸಾಕ್ಷ್ಯಾಧಾರ ಕೊರತೆಯಿಂದ ದಕ್ಷಿಣ ಕನ್ನಡ 3ನೇ ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದರು.

2009, ಜನವರಿ 24ರಂದು ನಡೆದಿದ್ದ ಪಬ್ ದಾಳಿ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪ್ರಸಾದ್ ಅತ್ತಾವರ, ಸುಭಾಸ್ ಪಡೀಲ್, ದಿನಕರ ಶೆಟ್ಟಿ ಸೇರಿ 26 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಮಂದಿ ಸಾಕ್ಷ್ಯ ಹೇಳಿದ್ದರು.

Related Articles

Leave a comment

Back to Top

© 2015 - 2017. All Rights Reserved.