ಭೀಕರ ಅಪಘಾತ: ಆಟೋ ಚಾಲಕ ಸಾವು

Crime, Kannada News, Regional No Comments on ಭೀಕರ ಅಪಘಾತ: ಆಟೋ ಚಾಲಕ ಸಾವು 16

ಚಾಮರಾಜನಗರ: ಉಡಿಗಾಲ ಗ್ರಾಮದ ಸಮೀಪ ಭೀಕರ ಅಪಘಾತ ಸಂಬವಿಸಿದ್ದು, ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಸರ್ಕಾರಿ ಬಸ್ ನ ಹಿಂಬಾಗ ಆಟೋಗೆ ತಗುಲಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಆಟೋ ಚಾಲಕ ನಟೇಶ್ ಮೂರ್ತಿ ಮೃತ ವ್ಯಕ್ತಿಯಾಗಿದ್ದು ನಂಜನಗೂಡು ತಾಲ್ಲೂಕಿನ ಪಿ ಮರಳ್ಳಿ ಗ್ರಾಮದವರಾಗಿದ್ದಾರೆ.

ಮತ್ತೊಬ್ಬ ನಾಗರಾಜು ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸಂಚಾರಿ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ:ರಾಮಸಮುದ್ರ ಎಸ್. ವೀರಭದ್ರಸ್ವಾಮಿ.

Related Articles

Leave a comment

Back to Top

© 2015 - 2017. All Rights Reserved.