ರಾಜಕೀಯ ಪ್ರಾತಿನಿಧ್ಯಕ್ಕಾಗಿ 8 ಜಿಲ್ಲೆಗಳ ವೀರಶೈವ ಲಿಂಗಾಯತ ಮುಖಂಡರ ಸಭೆ

Kannada News, Regional No Comments on ರಾಜಕೀಯ ಪ್ರಾತಿನಿಧ್ಯಕ್ಕಾಗಿ 8 ಜಿಲ್ಲೆಗಳ ವೀರಶೈವ ಲಿಂಗಾಯತ ಮುಖಂಡರ ಸಭೆ 12

ಮೈಸೂರು: ವೀರಶೈವ ಲಿಂಗಾಯತ ಹಿತರಕ್ಷಣಾ ವೇದಿಕೆ, ಮೈಸೂರು ವತಿಯಿಂದ ಇಂದು 8 ಜಿಲ್ಲೆಗಳ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಯಿತು.

ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದ ಸಭೆಯಲ್ಲಿ ಮೈಸೂರು ವಿಭಾಗದ 8 ಜಿಲ್ಲೆಗಳಲ್ಲಿ ನಮ್ಮ ಸಮುದಾಯದ ಮತದಾರ ಸಂಖ್ಯೆಯನ್ನು ಗಮನಿಸಿದಾಗ ಮತದಾರರ ಸಂಖ್ಯೆಗೆ ತಕ್ಕಂತೆ ನಮ್ಮ ಸುಮುದಾಯದ ವ್ಯಕ್ತಿಗಳಿಗೆ ರಾಜಕೀಯ ಪ್ರಾತಿನಿಧ್ಯ ಲಭಿಸುತ್ತಿಲ್ಲ. ವೀರಶೈವ ಲಿಂಗಾಯತ ಎಂಬುದು ಇಂದೇ ಸಮುದಾಯ ವಾಗಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬೇರಿಜನ್ನು ಹುಟ್ಟುಹಾಕುವ, ಗೊಂದಲವನ್ನು ಮೂಡಿಸುವ ರಾಜಕೀಯ ಕುತಂತ್ರವನ್ನು ಮಾಡುತ್ತಿದ್ದು ಈ ಮೂಲಕ ನಮ್ಮ ಸಮುದಾಯವನ್ನು ರಾಜಕೀಯ ನೇಪಾಥ್ಯಕ್ಕೆ ಸರಿಸುವಂತೆ ಮಾಡುತ್ತಿದ್ದಾರೆ ಹೀಗಾಗಿ ಸಮುದಾಯದ ಜನಾಂಗವನ್ನು ಎಚ್ಚರಿಸುವ ಸಲುವಾಗಿ ಜನಜಾಗೃತಿಯನ್ನುಂಟು ಮಾಡುವುದನ್ನು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯ್ತು.

ಸಭೆಯಲ್ಲಿ ಗೌರವ ಅಧ್ಯಕ್ಷರಾದ ಹೆಚ್. ಸಿ ಬಸವರಾಜು, ಬಿ ಆರ್ ಗುರುದೇವ್, ಅಧ್ಯಕ್ಷರಾದ ತಮ್ಮಣ್ಣ, ಕೆ.ಪಿ ಮಹದೇವಸ್ವಾಮಿ, ಯು.ಎಂ ಪ್ರಭುಸ್ವಾಮಿ ಹಾಗೂ ಎಂಟು ಜಿಲ್ಲೆಯ ಮುಖಂಡರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.