ಶೂಟಿಂಗ್ ವಿಶ್ವಕಪ್‌’ನಲ್ಲಿ ಭಾರತ ಐತಿಹಾಸಿಕ ಸಾಧನೆ

Kannada News, Sports No Comments on ಶೂಟಿಂಗ್ ವಿಶ್ವಕಪ್‌’ನಲ್ಲಿ ಭಾರತ ಐತಿಹಾಸಿಕ ಸಾಧನೆ 42

ನವದೆಹಲಿ: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌’ನಲ್ಲಿ ಭಾರತ ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಇದೇ ಮೊದಲ ಬಾರಿಗೆ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಮೆಕ್ಸಿಕೊದ ಗ್ವಾಡಲಜರದಲ್ಲಿ ಭಾನುವಾರ ಮುಕ್ತಾಯಗೊಂಡ ವಿಶ್ವಕಪ್ ಅನ್ನು ಭಾರತ 4 ಚಿನ್ನ, 1 ಬೆಳ್ಳಿ ಹಾಗೂ 4 ಕಂಚಿನ ಪದಕಗಳೊಂದಿಗೆ ಮುಕ್ತಾಯಗೊಳಿಸಿತು. ಕೂಟದ ಅಂತಿಮ ದಿನವಾದ ಭಾನುವಾರ, ಪುರುಷರ ಸ್ಕೀಟ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಮೂವರು ಶೂಟರ್‌’ಗಳು ಕಣದಲ್ಲಿದ್ದರು. ಆದರೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಕೂಟದಲ್ಲಿ ಭಾರತ ಪರ ಶಾಹಜರ್ ರಿಜ್ವಿ, ಮನು ಭಾಕರ್, ಅಖಿಲ್ ಶೆರೋನ್ ಹಾಗೂ ಓಂ ಪ್ರಕಾಶ್ ಚಿನ್ನ ಗೆದ್ದರೆ, ಅಂಜುಮ್ ಮೌದ್ಗಿಲ್ ಬೆಳ್ಳಿ, ಜಿತು ರೈ, ರವಿಕುಮಾರ್, ಮೆಹುಲಿ ಘೋಷ್ ಕಂಚು ಗೆದ್ದಿದ್ದರು.

ಭಾರತೀಯ ಶೂಟರ್’ಗಳ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.