ಶೂಟಿಂಗ್​ ವೇಳೆ ಕುಸಿದು ಬಿದ್ದ ನಟ ಅಮಿತಾಬ್​ ಬಚ್ಚನ್​

Entertainment, Kannada News No Comments on ಶೂಟಿಂಗ್​ ವೇಳೆ ಕುಸಿದು ಬಿದ್ದ ನಟ ಅಮಿತಾಬ್​ ಬಚ್ಚನ್​ 19

ಜೋಧ್​ಪುರ: ಥಗ್ಸ್​ ಆಫ್​ ಹಿಂದೂಸ್ತಾನ್​ ಶೂಟಿಂಗ್​ ವೇಳೆ ನಟ ಅಮಿತಾಬ್​ ಬಚ್ಚನ್​ ಕುಸಿದು ಬಿದ್ದಿದ್ದಾರೆ.

ಆಮೀರ್​ ಖಾನ್​ ನಿರ್ದೇಶನದ ಥಗ್ಸ್​ ಆಫ್​ ಹಿಂದೂಸ್ತಾನದಲ್ಲಿ ಅಮಿತಾಬ್ ಬಚ್ಚನ್​ ನಟಿಸುತ್ತಿದ್ದಾರೆ. ರಾಜಸ್ಥಾನದ ಜೋಧ್​ಪುರದಲ್ಲಿ ಶೂಟಿಂಗ್​ ನಡೆಯುತ್ತಿತ್ತು. ಈಗಾಗಲೆ ಜೋಧ್​ಪುರಕ್ಕೆ ಮುಂಬೈನಿಂದ ವೈದ್ಯರ ತಂಡ ತೆರಳಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ನಿರಂತರ ಶೂಟಿಂಗ್​ನಿಂದ ಬಳಲಿರುವ ಕಾರಣ ಬಚ್ಚನ್​​ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಶೂಟಿಂಗ್​ಗೂ ಮುನ್ನ ಅಮಿತಾಬ್​ ತಮ್ಮ ಆರೋಗ್ಯ ಸರಿಯಾಗಿಲ್ಲ ಎಂದು ಬ್ಲಾಗ್​ನಲ್ಲಿ ಬರೆದುಕೊಂಡಿದ್ದರು. ಖಾಸಗಿ ವಿಮಾನದಲ್ಲಿ ಅಮಿತಾಬ್​ ಬಚ್ಚನ್​ರನ್ನು ಮುಂಬೈಗೆ ಕರೆದುಕೊಂಡು ಬರಲಾಗುತ್ತಿದೆ. ಅಮಿತಾಬ್​​ ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳು ಅವರು ಶೂಟಿಂಗ್​ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಬಚ್ಚನ್​ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.