ಪರಮೇಶ್ವರ್’ರ ಅಂದಿನ ಸೋಲಿಗೆ ಕಾರಣ ಸಿಎಂ..? ಅಧಿಕಾರದ ಗದ್ದುಗೆಗಾಗಿ ರಾವಣರಾದ ಸಿದ್ದರಾಮಯ್ಯ..!

BREAKING NEWS, Kannada News, Regional, Top News No Comments on ಪರಮೇಶ್ವರ್’ರ ಅಂದಿನ ಸೋಲಿಗೆ ಕಾರಣ ಸಿಎಂ..? ಅಧಿಕಾರದ ಗದ್ದುಗೆಗಾಗಿ ರಾವಣರಾದ ಸಿದ್ದರಾಮಯ್ಯ..! 36

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರಿದ್ದು ಇಂದು ಇತಿಹಾಸ. ಅದೇ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸೋಲು ಅನುಭವಿಸಿದ್ದು ಅವರ ಪಾಲಿಗೆ ದುರಂತವೆ ಸರಿ.

ಸಿಎಂ ಹುದ್ದೆ ರೇಸ್’ನಲ್ಲಿದ್ದ ಪರಮ್ ರಿಗೆ ಆ ಒಂದು ಸೋಲು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿತ್ತು. ಪರಮಶ್ವರ್ ಪ್ರತಿ ಸ್ಪರ್ಧೆ ಹೊಡ್ಡಲು ಸಾಧ್ಯವಿಲ್ಲದಂತೆ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ 7000 ಮತಗಳ ಅಂತರ ಕಾಯ್ದಕೊಂಡಿದ್ದರು. ಆದರೆ ಇದೀಗ ಆ ಚುನಾವಣೆ ಮುಗಿದು, ಪರಮ್ ಅವರು ಸೋತು, ಸಿದ್ದರಾಮಯ್ಯ ಅವರು 5 ವರ್ಷಗಳ ಅಧಿಕಾರ ಮುಗಿಯುತ್ತಾ ಬಂದು ಮತ್ತೊಂದು ಚುನಾವಣೆ ಎದುರಾಗಿದೆ. ಅಂದಿನ ಆ ಸೋಲಿಗೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂಬ ಗಂಭೀರ ಆರೋಪ ಹೊರಿಸಲಾಗಿದೆ.

ಆ ಆರೋಪ ಮಾಡಿದವರು ಬಿಜೆಪಿಯವರಾದ ಈಶ್ವರಪ್ಪ ಹಾಗೂ ಒಂದು ಕಾಲದಲ್ಲಿ ಸಿಎಂ ಆಪ್ತ ಹಾಗೂ ಕಾಂಗ್ರೆಸ್ಸಿನವರೇ ಆದ ಶ್ರೀನಿವಾಸ್ ಪ್ರಾಸಾದ್.

ಹೌದು ಇತ್ತೀಚಿಗಷ್ಟೆ ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಸೋಲಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿ ಮೇಲೆ ಆಣೆ ಮಾಡಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಪರಮೇಶ್ವರ್‌ ಅವರನ್ನು ಯಾರು ಸೋಲಿಸಿದರು ಎಂಬುದನ್ನು ತುಮಕೂರಿನ ಶಾಸಕ ರಾಜಣ್ಣ ಅವರೇ ಹೇಳುತ್ತಾರೆ ಕೇಳಿ ನೋಡಿ. ಕಳೆದ ಚುನಾವಣೆಯಲ್ಲಿ ಪರಮೇಶ್ವರ್‌ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರೇ ಎಂಬುದರಲ್ಲಿ ಯಾವುದೇ ಸಂಶಯ ಬೇಡ. ಆದರೆ, ಸಿದ್ದರಾಮಯ್ಯ ಈಗ ನಾವೆಲ್ಲಾ ಒಂದಾಗುತ್ತಿದ್ದೇವೆ. ಪರಮೇಶ್ವರ್‌ ಗೆದ್ದರೆ ನಾನು ಗೆದ್ದಂತೆ ಎಂದು ಕೊರಟಗೆರೆಯಲ್ಲಿ ಹೇಳಿದ್ದಾರೆ. ಇದೆಲ್ಲ ಬರೀ ನಾಟಕ ಎಂದಿದ್ದರು.

ಇದರ ಬೆನ್ನಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್ಸಿನವರೆ ಹಾಗೂ ಸಿಎಂ ಗೆ ಆಪ್ತರಾಗಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಅವರು ಈ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣ, ಪರಮೇಶ್ವರ್ ರಾವಣನ ತಮ್ಮ ವಿಭೀಷಣ ಎಂದು ಶ್ರೀನಿವಾಸ ಪ್ರಸಾದ್ ನಾನೂ‌ ಮತ್ತು‌ ಪರಮೇಶ್ವರ್ ಅಣ್ಣ ತಮ್ಮ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾವಣ ಮತ್ತು ವಿಭೀಷಣ ಅಣ್ಣ ತಮ್ಮಂದಿರು. ಸಿ.ಎಂ. ಹೋಲಿಕೆ‌ ಮಾಡಿರುವುದು ರಾಮ ಲಕ್ಷ್ಮಣ ಸಹೋದರತ್ವ ಬಗ್ಗೆ ಅಲ್ಲ. ರಾವಣ ಮತ್ತು ವಿಭೀಷಣನ ಸಹೋದರತ್ವದ ಬಗ್ಗೆ. ಪರಮೇಶ್ವರ್ ಅವರನ್ನ ಸೋಲಿಸಿದ್ದು ಸಿದ್ದರಾಮಯ್ಯ. ಇದು ಅವರ ರಾವಣನ ಬುದ್ಧಿ. ಅದು ಗೊತ್ತಿದ್ದೂ ಈಗ ಪರಮೇಶ್ವರ್ ಸುಮ್ಮನಿರುವುದು‌ ವಿಭೀಷಣನ ಬುದ್ಧಿ ಎಂದು ಟೀಕಿಸಿದ್ದಾರೆ.

ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಆದರೆ ಈ ಆರೋಪ ತಮ್ಮ ಪಕ್ಷದವರನ್ನೇ ಸಿಎಂ ಮುಗಿಸಿದರಾ ಎಂಬ ಪ್ರಶ್ನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

Related Articles

Leave a comment

Back to Top

© 2015 - 2017. All Rights Reserved.