ಅತಂತ್ರ ಸ್ಥಿತಿಯಲ್ಲಿ ಐಎಎಸ್ ಅಧಿಕಾರಿ ಡಿ ರಂದೀಪ್: ಪತ್ರ ಬರೆದರೂ ಉತ್ತರಿಸದ ಹಿರಿಯ ಅಧಿಕಾರಿಗಳು..!

BREAKING NEWS, Kannada News, Regional, Top News No Comments on ಅತಂತ್ರ ಸ್ಥಿತಿಯಲ್ಲಿ ಐಎಎಸ್ ಅಧಿಕಾರಿ ಡಿ ರಂದೀಪ್: ಪತ್ರ ಬರೆದರೂ ಉತ್ತರಿಸದ ಹಿರಿಯ ಅಧಿಕಾರಿಗಳು..! 28

ಮೈಸೂರು: ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಯಾಗಿರುವ ಡಿ ರಂದೀಪ್ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದೇಶಕ್ಕೆ ತಡೆ ನೀಡಿರುವ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಡಿ.ರಂದೀಪ್ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅತ್ತ ಮೈಸೂರು ಡಿಸಿಯಾಗಿ ಶಿವಕುಮಾರ್ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಇತ್ತ ಮೈಸೂರಲ್ಲೂ ಇರಲಾಗದೆ, ಹಾಸನಕ್ಕೂ ತೆರಳಲಾಗದಂತ ಸ್ಥಿತಿ ನಿರ್ಮಾಣವಾಗಿದೆ.

ಈ ಸಂಬಂಧ ಡಿಪಿಆರ್‍ಗೆ ಎರಡು ಪತ್ರವನ್ನು ಬರೆದಿದ್ದಾರೆ. ಆದರೆ ಐಎಎಸ್ ಅಧಿಕಾರಿ ರಂದೀಪ್ ಬರೆದಿದ್ದರೂವ ಪತ್ರಕ್ಕೆ ಹಿರಿಯ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಹೇಳಲಾಗಿದೆ.

ಇತ್ತೀಚೆಗೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಹಾಸನ ಡಿಸಿ ಆಗಿ ರಂದೀಪ್ ಅವರನ್ನು ವರ್ಗಾಯಿಸಲಾಗಿತ್ತು. ಹಾಸನ ಡಿಸಿ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿಗೆ ವರ್ಗಾಯಿಸಿತ್ತು. ಆದರೆ ರೋಹಿಣಿ ಅವರ ವರ್ಗಾವಣೆ ತಡೆಯಾಜ್ಞೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿಯವರು ಹಾಸನ ಡಿಸಿ ಆಗಿಯೇ ಮುಂದುವರೆದಿರುವುದರಿಂದ ರಂದೀಪ್ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.